Bagalakote: ಬಾಗಲಕೋಟೆ : ಮನುಷ್ಯತ್ವ ಅನ್ನೋದು ಇದ್ರೆ ಜಾಗ, ಜಾತಿ ಯಾವುದೂ ವಿಷಯವೇ ಅಲ್ಲ ಅನ್ನೋದನ್ನು ಕ್ರಿಕೇಟರ್ ರಿಷಬ್ ಪಂಥ್ ಸಾಬೀತು ಮಾಡಿದ್ದಾರೆ.
ಬಾಗಲಕೋಟೆಯ ವಿದ್ಯಾರ್ಥಿನಿಗೆ ಬಿಸಿಎಂ ತರಗತಿ ಪ್ರವೇಶಕ್ಕೆ 40 ಸಾವಿರ ಹಣದ ಅವಶ್ಯಕತೆ ಇತ್ತು. ಹಾಗಾಗಿ ಪಂಥ್ ವಿದ್ಯಾರ್ಥಿನಿಗೆ ಹಣದ ಸಹಾಯ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ವಿದ್ಯಾರ್ಥಿನಿ ಜ್ಯೋತಿ ಕಣಬೂರ್ ಗೆ ಹಣದ ಅವಶ್ಯಕತೆ ಇತ್ತು. ಈಕೆ ದ್ವಿತೀಯ ಪಿಯುಸಿಯಲ್ಲಿ 85% ಅಂಕ ಪಡೆದಿದ್ದಳು. ಹಾಗಾಗಿ ಬಿಸಿಎಂ ಮಾಡಬೇಕೆಂದಿದ್ದಳು. ಆದರೆ ಹಣದ ಅವಶ್ಯಕತೆ ಇತ್ತು.
ಈಕೆಯ ತಂದೆ ತೀರ್ಥಯ್ಯ ಕಣಬೂರ ಹಣ ಹೊಂದಿಸಲಾಗದೆ ಪರದಾಡುತ್ತಿದ್ದರು. ಈ ವಿಷಯ ಅದೇ ಊರಿನ ಅನಿಲ ಹುಣಸಿಕಟ್ಟಿ ಎಂಬ ಯುವಕನಿಗೆ ಗೊತ್ತಾಗಿದೆ. ಅನಿಲ ಹುಣಸೀಕಟ್ಟಿ ಸ್ನೇಹಿತರು ಐಪಿಎಲ್ನಲ್ಲಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಅನಿಲ ವಿಷಯ ತಿಳಿಸಿದ್ದಾನೆ. ಅವರು ರಿಷನ್ ಪಂಥ್ ಗಮನಕ್ಕೆ ತಂದಿದ್ದಾರೆ. ಆಗ ರಿಷಬ್ ಪಂಥ್ ಅವರ ಮೂಲಕ ಜ್ಯೋತಿ ಅವರಿಗೆ ೪೦ ಸಾವಿರ ಫೀಸ್ ಹಣ ನೀಡಿದ್ದಾರೆ.
ರಿಷಬ್ ಪಂಥ್ ಸಹಾಯಕ್ಕೆ ಜ್ಯೋತಿ ಹಾಗೂ ಕುಟುಂಬ ಕೃತಜ್ಙತೆ ಸಲ್ಲಿಸಿದ್ದಾರೆ.