International News: ನಿಮಗೇನಾದರೂ ಸಲಹೆ ಬೇಕಿದ್ದಲ್ಲಿ ಚಾಟ್ ಜಿಪಿಟಿ ಬಳಸಿ, ವಿವರಣೆ ಪಡೆಯಿರಿ ಅಂತಾ ಕೆಲವರು ಸಲಹೆ ನೀಡುವುದನ್ನು ನೀವು ಕೇಳಿರುತ್ತೀರಿ. ಆದರೆ ಎಲ್ಲ ವಿಷಯದಲ್ಲೂ ಇದರ ಸಲಹೆ ಪಡೆಯುವ ಮುನ್ನ ಸ್ವಲ್ಪ ಹುಷಾರಾಗಿರಬೇಕು. ಏಕೆಂದರೆ ವಿದೇಶದಲ್ಲಿ ಓರ್ವ ವ್ಯಕ್ತಿ ಇದರಿಂದ ಸಲಹೆ ಪಡೆದು, ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನ್ಯೂಯಾರ್ಕ್‌ನ 60 ವರ್ಷದ ವ್ಯಕ್ತಿ ಚಾಟ್ ಜಿಪಿಟಿ ಬಳಸಿ, ಅದರಲ್ಲಿ ಆರೋಗ್ಯ ಸಲಹೆ ಕೇಳಿದ್ದಾರೆ. ಚಾಟ್ ಜಿಪಿಟಿ ನೀಡಿದ ಸಲಹೆಯನ್ನು ಪಾಲಿಸಿದ್ದಾರೆ. ಆಹಾರದಲ್ಲಿ ಉಪ್ಪು ಮಿತವಾಗಿ ಬಳಸಿ ಎಂದಿದ್ದಕ್ಕೆ ಹಾಗೇ ಮಾಡಿದ್ದಾರೆ. ಆದರೆ ಅದೇನು ಏರುಪೇರಾಯಿತೋ ಏನೋ, ಅವರ ಆರೋಗ್ಯ ಹಾಳಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.
3 ವಾರಗಳ ಕಾಲ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಪಡೆದ ಕಾರಣಕ್ಕೆ, ಇದೀಗ ಆ ವ್ಯಕ್ತಿ ಬದುಕುಳಿದಿದ್ದಾರೆ. ಇನ್ನ“ಂದು ಶಾಕಿಂಗ್ ಸಂಗತಿ ಅಂದ್ರೆ, ಆ ವ್ಯಕ್ತಿ ಸೋಡಿಯಂ ಬ್ರೋಮೈಡ್ ಎಂಬ ವಸ್ತುವನ್ನು ಬಳಸಿ, ತಮ್ಮ ಆಹಾರದಿಂದ ಸೋಡಿಯಂ ಕ್ಲೋರೈಡ್ ತೆಗೆಯಬೇಕೆಂದು ನಿರ್ಧರಿಸಿದ್ದರು. ಈ ಸಲಹೆಯನ್ನು ಚಾಟ್ ಜಿಪಿಟಿ ನೀಡಿತ್ತು. ಇದರ ಸೇವನೆಯ ಕಾರಣಕ್ಕೆ ಅವರು ಸಾವಿನ ಕದ ಬಡಿದು ಬರಬೇಕಾಯಿತು.
ಚಾಟ್ ಜಿಪಿಟಿ ಮುಂದೆ ಹಲವರ ಉದ್ಯೋಗ ಕಸಿದುಕ“ಳ್ಳಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ. ಹೀಗೆ ಆದರೆ ಬರೀ ಉದ್ಯೋಗವಲ್ಲದೇ, ಆರೋಗ್ಯ, ಜೀವ, ಬುದ್ಧಿ ಎಲ್ಲವನ್ನೂ ಕಸಿಯಬಹುದು. ಹುಷಾರಾಗಿರಿ.