ಈ ಬಾರಿಯ ಐಪಿಎಲ್ ಮುಂಬೈ ಇಂಡಿಯನ್ಸ್ ಪಾಲಿಗೆ ಕಹಿಯಾಗಿದೆ. ರೋಹಿತ್ ಶರ್ಮಾ ನೇತೃತ್ವzಲ್ಲಿ ಆಡಿದ ಐದನೆ ಪಂದ್ಯದಲ್ಲೂ ಮುಂಬೈ ಸೋಲು ಕಂಡಿದೆ.
ಆದರೆ ಮುಂಬೈ ತಂಡದ ಕೆಲವು ವೈಯಕ್ತಿಕ ಪ್ರದಶ್ನಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಮದ್ಯದಲ್ಲಿ ಜೂನಿಯರ್ ಎಬಿಡಿ ಖ್ಯಾತಿಯ ಡೆವಾಲ್ಡ್ ಬ್ರೆವಿಸ್ ಪಂಜಾಬ್ ವಿರುದ್ಧ ಸ್ಫೋಟ ಬ್ಯಾಟಿಂಗ್ ಮಾಡಿದರು.
ಮೂರನೆ ಕ್ರಮಾಂಕದಲ್ಲಿ ಬಂದ ಬ್ರೆವಿಸ್ 25 ಎಸೆತಗಳಲ್ಲಿ ಬೌಂಡರಿ 5 ಸಿಕ್ಸರ್ 49 ರನ್ ಚಚ್ಚಿದರು. ಅದರಲ್ಲೂ ರಾಹುಲ್ ಚಾಹರ್ ಅವರ ಒಂದೇ ಓವರ್‍ನಲ್ಲಿ 29 ರನ್ ಸಿಡಿಸಿದರು.
ಮೊದಲ ಎಸೆತವನ್ನ ತಿ¯ಕ್ ವರ್ಮಾ ಒಂದು ರನ್ ತೆಗೆದು ಸ್ಟ್ರೈಕ್ ಬಿಟ್ಟು ಕೊಟ್ಟರು.ಎರಡೆನೆ ಎಸೆತವನ್ನು ಬೌಂಡರಿಗೆ ಅಟ್ಟಿದರು. ಮೂರನೆ ಎಸೆತವನ್ನು ಲಾಂಗ್ ಆನ್ ಮೂಲಕ ಸಿಕ್ಸರ್, ನಾಲ್ಕನೆ ಎಸೆತವನ್ನು ವೈಡ್ ಲಾಂಗ್‍ಆನ್‍ನಲ್ಲಿ ಸಿಕ್ಸರ್, ಐದನೆ ಎಸೆತವನ್ನು ಡೀಪ್ ಮಿಡ್ ವಿಕೆಟ್‍ನತ್ತ ಸಿಕ್ಸರ್‍ಗೆ ಅಟ್ಟಿದರು.
ಒಂದೇ ಓವರ್‍ನಲ್ಲಿ 28 ರನ್ ಕಲೆ ಹಾಕಿ ಸ್ಕೋರ್ ಹೆಚ್ಚಿಸಿ ಭರವಸೆ ಮೂಡಿಸಿದರು. ಆದರೂ ಮುಂಬೈ ಗೆಲ್ಲಲು ಸಾಧ್ಯವಾಗಲಿಲ್ಲ.
ಚೊಚ್ಚಲ ಐಪಿಎಲ್ ಆಡುತ್ತಿರುವ ಬ್ರೇವಿಸ್ ಜೂನಿಯರ್ ಎಬಿಡಿ ಅಂತಾನೆ ಫೇಮಸ್.
ಹರಾಜಿಗೂ ಮುನ್ನ ಬ್ರೇವಿಸ್ ಆರ್‍ಸಿಬಿ ತಂಡದಲ್ಲಿ ಆಡುತ್ತಾರೆ. ಎಬಿಡಿ ಸ್ಥಾನವನ್ನು ತುಂಬುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಡೇವಲ್ಡ್ ಬ್ರೇವಿಸ್ ಅವರನ್ನು ಖರೀದಿಸಿತು.
ಬ್ರೇವಿಸ್ ಈ ಐಪಿಎಲ್‍ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದು ಕೋಲ್ಕತ್ತಾ ವಿರುದ್ಧ 29, ಆರ್‍ಸಿಬಿ ವಿರುದ್ಧ 8 ಹಾಗೂ ಪಂಜಾಬ್ ವಿರುದ್ಧ 49 ರನ್ ಗಳಿಸಿ ಮಿಂಚಿದ್ದಾರೆ.