ಮುಂಬೈ: 35ನೇ ಐಪಿಎಲ್ ಟಿ20 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಡಿ.ವೈ ಪಾಟೀಲ್ ಕೀಡಾಂಗಣದಲ್ಲಿ ನಡೆಯಲಿರುವ ಕದನ ಕುತೂಹಲಕಾರಿಯಾಗಿದೆ.
ಶ್ರೇಯಸ್ ನೇತೃತ್ವದ ಕೋಲ್ಕತ್ತಾ ತಂಡ 7 ಪಂದ್ಯಗಳಿಂದ 3ರಲ್ಲಿ ಗೆದ್ದು 4ರಲ್ಲಿ ಸೋತು 6 ಅಂಕಗಳಿಸಿದೆ.
ಇನ್ನು ಹಾರ್ದಿಕ್ ಪಾಂಡ್ಯ ನೇತೃಥ್ವದ ಗುಜರಾತ್ ತಂಡ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 1ರಲ್ಲಿ ಸೋತು 10 ಅಂಕ ಸಂಪಾದಿಸಿದೆ.
ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ತಂಡ ರಾಜಸ್ಥಾನ ರಾಯಲ್ಸ್ ವಿರುದ್ದ 7 ರನ್‍ಗಳ ಅಂತರದಿಂದ ವಿರೋಚಿತ ಸೋಲು ಅನುಭವಿಸಿತ್ತು. ಗುಜರಾತ್ ತಂಡ ಚೆನ್ನೈ ವಿರುದ್ಧ ರೋಚಕ ಗೆಲುವು ದಾಖಲಿಸಿತ್ತು.
ಕೋಲ್ಕತ್ತಾ ತಂಡಕ್ಕೆ ಆರಂಭಿಕ ಸಮಸ್ಯೆ ಕಾಡ್ತಿದೆ ಆರಾನ್ ಫಿಂಚ್ ಫಾರ್ಮ್‍ಗೆ ಮರಳಿದ್ದಾರೆ. ವೆಂಕಟೇಶ್ ಅಯ್ಯರ್ ಫಾರ್ಮ್‍ಗೆ ಮರಳಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಬೇಕಿದೆ.
ಸುನಿಲ್ ನೆರೈನ್ ಸಂದರ್ಭಕ್ಕೆ ತಕ್ಕಂತೆ ಯಾವ ಕ್ರಮಾಂಕದಲ್ಲಾದರೂ ಬ್ಯಾಟ್ ಮಾಡುವವಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್ ಸ್ಫೋಟಕ ಬ್ಯಾಟಿಂಗ್ ಮಾಡಬೇಕಿದೆ. ಸ್ಪೋಟಕ್ ಬ್ಯಾಟರ್ ಆಂಡ್ರೆ ರಸೆಲ್ ಚೆನ್ನಾಗಿ ಆಡುತ್ತಿದ್ದಾರೆ ಆದರೆ ಮ್ಯಾಚ್ ಫಿನಿಶ್ ಮಾಡುತ್ತಿಲ್ಲ.
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಉಮೇಶ್ ಯಾದವ್ ಆರಂಭದಲ್ಲಿ ಅದ್ಬುತವಾಗಿ ವಿಕೆಟ್ ಪಡೆದರು. ಆದರೆ ಕೆಲವು ಪಂದ್ಯಗಳಿಂದ ವಿಕೆಟ್ ಪಡೆಯದೇ ನಿರಾಸೆ ಅನುಭವಿಸಿದ್ದಾರೆ. ವೇಗಿ ಪ್ಯಾಟ್ ಕಮಿನ್ಸ್ ದುಬಾರಿ ಬೌಲರ್ ಆಗಿದ್ದಾರೆ. ರಸೆಲ್ ಬೌಲಿಂಗ್‍ನಲ್ಲೂ ಮಿಂಚಿತ್ತಿರುವುದು ಸಮಾಧಾನದ ವಿಷಯವಾಗಿದೆ.
ಸಂಭಾವ್ಯ ತಂಡಗಳು:
ಗುಜರಾತ್ ತಂಡ: ಶುಭಮನ್ ಗಿಲ್, ಮ್ಯಾಥೀವ್ ವೇಡ್, ವಿಜಯ್ ಶಂಕರ್, ಹರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ,ರಶೀದ್ ಖಾನ್, ಲಾಕಿ ಫಗ್ರ್ಯೂಸನ್,ಮೊಹ್ಮದ್ ಶಮಿ,ಯಶ್ ದಯಾಳ್.
ಕೋಲ್ಕತ್ತಾ ನೈಟ್ ರೈಡರ್ಸ್: ಅರಾನ್ ಫಿಂಚ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ಆಂಡ್ರೆ ರಸೆಲ್, ಸುನಿಲ್ ರಸೆಲ್, ಪ್ಯಾಟ್ ಕಮಿನ್ಸ್, ಶಿವಂ ಮವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.