ರಾಜಸ್ಥಾನ ರಾಯಲ್ಸ್ ತಂಡದ ಆಲ್ರೌಂಡರ್ ಆರ್.ಅಶ್ವಿನ್ ನಿನ್ನೆ ಲಕ್ನೊ ವಿರುದ್ಧದ ಪಂದ್ಯದಲ್ಲಿ ರಿಟೈರ್ ಔಟ್ ಆಗಿ ಹೊರ ನಡೆದರು. ಇದರೊಂದಿಗೆ ಐಪಿಎಲ್‍ನಲ್ಲಿ ಬ್ಯಾಟರ್ ಒಬ್ಬರು ಈ ರೀತಿ ಸ್ವಯಂ ಪ್ರೇರಣೆಯಿಂದ ಹೊರ ನಡೆದಿದ್ದು ಇದೇ ಮೊದಲ ಬಾರಿಯಾಗಿದೆ.
6ನೇ ಕ್ರಮಾಂಕದಲ್ಲಿ ಕಣಕಿಳಿದಿದ್ದ ಅಶ್ವಿನ್ 23 ಎಸೆತದಲ್ಲಿ 28 ರನ್ ಗಳಿಸಿದ್ದರು.
19ನೇ ಓವರ್‍ನ ಎರಡನೆ ಎಸೆತದಲ್ಲಿ ಹೊರ ನಡೆದರು.ನಂತರ ಬಂದ ರಿಯಾನ್ ಪರಾಗ್ ಎರಡು ಬೌಂಡರಿ ಹೊಡೆದು ಔಟಾದರು. ರಾಜಸ್ಥಾನ ತಂಡ 165 ರನ್ ಕಲೆ ಹಾಕಿತು. ಅಶ್ವಿನ್ ಅವರ ನಡೆ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿತು.
ಸಹ ರನ್ನರ್ ಶಿಮ್ರಾನ್ ಹೇಟ್ಮಯರ್‍ಗೆ ಈ ಬಗ್ಗೆ ಏನು ಗೊತ್ತಿಲ್ಲ ಎಂದಿದ್ದಾರೆ. ಆವೇಶ್ ಖಾನ್ ಓವರ್‍ನಲ್ಲಿ ಅಶ್ವಿನ್ ಶಾಕ್‍ಗೆ ಒಳಗಾದವರಂತೆ ಕಂಡು ಬಂದರು.
ಅಶ್ವಿನ್ ತಾವಾಗಿಯೇ ಹೊರ ನಡೆದರಾ ಅತವಾ ಡಗೌಟ್‍ನಿಂದ ಸೂಚನೆ ಬಂದ ನಂತರ ಹೊರನಡೆದರಾ ಗೊತ್ತಿಲ್ಲಾ.
ಫ್ರಾಂಚೈಸಿ ಲೀಗ್‍ಗಳಲ್ಲಿ ಈ ರೀತಿ ರಿಟೈರ್ ಆಗಿದ್ದು 2ನೇ ಬಾರಿ, 2019ರ ಬಾಂಗ್ಲಾ ಲೀಗ್‍ನಲ್ಲಿ ಸುನ್ಜುಮುಲ್ ಇಸ್ಲಾಮ್ ರಿಟೈರ್ ಔಟ್ ಆಗಿದ್ದರು.
ನಿಯಮಗಳ ಪ್ರಕಾರ, ಅಂಪೈಯರ್ ಅನುಮತಿ ಇಲ್ಲದೇ ಬ್ಯಾಟರ್ ರಿಟೈರ್ ಆದರೆ ಔಟೆಂದು ಪರಿಗಣಿಸಬೇಕಾಗುತ್ತದೆ. ಮತ್ತೆ ಆಡಲು ನಾಯಕ ವಿರೋಧಿಸಿದರೂ ಆಡಲು ಅವಕಾಶ ಇರುವುದಿಲ್ಲ.
ಅಶ್ವಿನ್ ಅವರೆ ಸ್ವಯಂ ಪ್ರೇರಣೆಯಿಂದ ಮೈದಾನದಿಂದ ಹೊರ ಬಂದರೂ ಎಂದು ರಾಜಸ್ಥಾನ ಮುಖ್ಯ ಕೋಚ್ ಕುಮಾರ ಸಂಗಕ್ಕಾರ ಸ್ಪಷ್ಟನೆ ನೀಡಿದ್ದಾರೆ.