Saturday, April 19, 2025

Latest Posts

ಬುಮ್ರಾ, ನಿತೀಶ್ ರಾಣಾಗೆ ಐಪಿಎಲ್ ಬರೆ

- Advertisement -

ಪುಣೆ: ನಿನ್ನೆ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು.
ಕಮಿನ್ಸ್ ಅವರ ಅಬ್ಬರದ ಬ್ಯಾಟಿಂಗ್‍ಗೆ ಮುಂಬೈ ತಂಡ ಥಂಡಾ ಹೊಡಿಯಿತು. ಐದು ಬಾರಿ ಚಾಂಪಿಯನ್ ಮುಂಬೈ ಭಾರೀ ಮುಖಭಂಗ ಅನುಭವಿಸಿತು.

ಇದೀಗ ಗೆಲುವಿನ ಸಿಹಿ ಅನುಭವಿಸಿದ ಮುಂಬೈಗೆ ಹಾಗೂ ಸೋಲು ಅನುಭವಿಸಿದ ಕೆಕೆಆರ್‍ಗೆ ಆಘಾತ ಉಂಟಾಗಿದೆ.
ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್‍ಪ್ರೀತ್ ಬೂಮ್ರಾ ಹಾಗೂ ಕೆಕೆಆರ್ ತಂಡದ ನಿತೀಶ್ ರಾಣಾ ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ಕೋಲ್ಕತ್ತಾ ತಂಡದ ನಿತೀಶ್ ರಾಣಾಗೆ ಪಂದ್ಯದ ಶೇ.10ರಷ್ಟು ದಂಡ ವಿಧಿಸಲಾಗಿದೆ ಎಂದು ಬಿಸಿಸಿಐನ ಐಪಿಎಲ್ ಆಡಳಿತ ಮಂಡಳಿ ಹೇಳಿದೆ.

ಇವರ ಜೊತೆಗೆ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಐಪಿಎಲ್ ನೀತಿ ನಿಯಮಗಳನ್ನ ಉಲ್ಲಂಘಿಸಿದಕ್ಕೆ ಲೆವೆಲ್1 ರಲ್ಲಿ ತಪಿತಸ್ಥ ಎಂದು ಸಾಬೀತಾಗಿದೆ.ಜೊತೆಗೆ ಬೂಮ್ರಾ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಲೆವೆಲ್ 1ರ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ಮ್ಯಾಚ್ ರೆಫರಿಯ ನಿರ್ಧಾರ ಕೂಡ ಅಚಿತಿಮವಾಗಿರುತ್ತದೆ.

ಈ ಇಬ್ಬರ ಆಟಗಾರರಿಗೆ ಯಾಕೆ ದಂಡ ವಿಧಿಸಿದ್ದು ಅನ್ನೋದನ್ನ ಐಪಿಎಲ್ ಆಡಳಿತ ಮಂಡಳಿ ಹೇಳಲು ನಿರಾಕರಿಸಿದೆ.

- Advertisement -

Latest Posts

Don't Miss