Wednesday, September 17, 2025

Latest Posts

ಮುಂಬೈಗೆ ಪ್ರತಿಷ್ಠೆ, ಚೆನ್ನೈ ಉಳಿವಿಗಾಗಿ ಹೋರಾಟ 

- Advertisement -

ಮುಂಬೈ: ಐಪಿಎಲ್‍ನ ಪ್ಲೇ ಆಫ್ ನಿರೀಕ್ಷೆಯಲ್ಲಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಕದನದಲ್ಲಿ  ಮುಂಬೈ ತಂಡ ಪ್ರತಿಷ್ಠೆಗಾಗಿ ಹೋರಾಡಿದರೆ ಚೆನ್ನೈ ತಂಡ ಉಳಿವಿಗಾಗಿ ಹೋರಾಡಲಿದೆ. ಧೋನಿ ಪಡೆ ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತರೆ ಟೂರ್ನಿಯಿಂದ ಹೊರ ಬೀಳಲಿದೆ.

ಮೊನ್ನೆ ಡೆಲ್ಲಿ  ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ತಂಡ 91 ರನ್‍ಗಳ `ಭರ್ಜರಿ ಗೆಲುವು ದಾಖಲಿಸಿದ್ದು  ತಂಡದ ಬ್ಯಾಟರ್‍ಗಳ ಆತ್ಮವಿಶ್ವಾಸ ಹೆಚ್ಚಿಸಿದೆ.

ಚೆನ್ನೈ ತಂಡದ ಆರಂಭಿಕ ಬ್ಯಾಟರ್ ಡೇವೊನ್ ಕಾನ್ವೆ ಸತತ ಮೂರು ಅರ್ಧ   ಶತಕ ಗಳನ್ನು ಸಿಡಿಸಿದ್ದಾರೆ. ಡೆಲ್ಲಿ ವಿರುದ್ಧ 87 ರನ್ ಪೇರಿಸಿದ್ದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಸಹ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಜೊತೆ ಸೋಟಕ ಇನ್ನಿಂಗ್ಸ್ ಆಡಬೇಕಿದೆ.

ಆಲ್ರೌಂಡರ್ ರವೀಂದ್ರ ಜಡೇಜಾ ಕಳೆದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಆಡಿರಲಿಲ್ಲ. ಈ ಪಂದ್ಯದ ಮೂಲಕ ಮತ್ತೆ ತಂಡಕ್ಕೆ ಮರಳಲಿದ್ದಾರೆ. ರೋಹಿತ್ ಪಡೆ ವಿರುದ್ಧ ಚೆನ್ನೈ ದೊಡ್ಡ ಮೊತ್ತ ಕಲೆ ಹಾಕಬೇಕು. ಎಲ್ಲಾ ಬ್ಯಾಟರ್‍ಗಳು ಸೋಟಕ ಬ್ಯಾಟಿಂಗ್ ಮಾಡಬೇಕು. ಕಳೆದ ಮುಖಾಮುಖಿಯಲ್ಲಿ `ಧೋನಿ ಫಿನಿಶರ್ ಆಗಿದ್ದರು.

ಚೆನ್ನೈ ಬೌಲರ್‍ಗಳು ಮೊನ್ನೆ ಡೆಲ್ಲಿ ತಂಡವನ್ನು 117 ರನ್ ಗಳಿಗೆ ಆಲೌಟ್ ಮಾಡಿದರು.ಸ್ಪಿನ್ನರ್ ಮೊಯಿನ್ ಅಲಿ, ಮುಖೇಶ್ ಚೌಧ`ರಿ ಹಾಗೂ ಸೀಮರ್‍ಜೀತ್ ಸಿಂಗ್ ಎದುರಾಳಿ ಬ್ಯಾಟರ್‍ಗಳಿಗೆ ಕಂಟಕವಾಗಲಿದ್ದಾರೆ. ವೇಗಿ ಮಹೇಶ್ ತೀಕ್ಷ್ಣ ಅವರ ನಾಲ್ಕು ಓವರ್‍ಗಳು ಪಂದ್ಯದ ಗತಿಯನ್ನೆ ಬದಲಿಸುತ್ತೆ. ಆಲ್ರೌಂಡರ್ ಡ್ವೇನ್ ಬ್ರಾವೋ ಕೂಡ ದೊಡ್ಡ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಸಿಡಿಯಬೇಕು ಮುಂಬೈ ಬ್ಯಾಟರ್‍ಗಳು

ಇನ್ನು ಮುಂಬೈ ತಂಡದಲ್ಲಿ  ನಾಯಕ ರೋಹಿತ್ ಶರ್ಮಾ ಟೂರ್ನಿಯಲ್ಲಿ ಈವರೆಗೂ 200 ರನ್ ಗಳಿಸಿದ್ದಾರೆ.ಇಶನ್ ಕಿಶನ್ 321 ರನ್ ಗಳಿಸಿದ್ದು ತಂಡಕ್ಕೆ ಉತ್ತಮ ಆರಂಭ ನೀಡಬೇಕಿದೆ. ಕೋಲ್ಕತ್ತಾ ವಿರುದ್ಧ ಎಡವಿದ್ದ ಮಧ್ಯಯಮ ಕ್ರಮಾಂಕದ ಬ್ಯಾಟರ್‍ಗಳು ಸಿಡಿಯಬೇಕಿದೆ.

ಸೂರ್ಯ ಕುಮಾರ್ ತಂಡದಿಂದ ಹೊರ ನಡೆದಿದ್ದರಿಂದ ತಿಲಕ್ ವರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್ ಮತ್ತು ಕಿರಾನ್ ಪೆÇಲಾರ್ಡ್ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.

ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಮತ್ತೆ ಲಯಕ್ಕೆ ಮರಳಿದ್ದಾರೆ. ಇವರಿಗೆ ತಂಡದ ಬೌಲರ್‍ಗಳಾದ ಡೇನಿಯಲ್ ಸ್ಯಾಮ್ಸ್‍, ರಿಲೆ ಮೆರ್ಡಿತ್ ಮತ್ತು ಕುಮಾರ್ ಕಾರ್ತಿಕೇಯಾ ಬೆಂಬಲ ನೀಡಬೇಕಿದೆ.

ಮುಂಬೈಗೆ ಇದು ಸೇಡಿನ ಪಂದ್ಯವಾದರೆ ಚೆನ್ನೈಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಮುಂಬೈ ತಂಡ: ರೋಹಿತ್ ಶರ್ಮಾ (ನಾಯಕ), ಇಶನ್ ಕೀಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ. ರಮಣದೀಪ್ ಸಿಂಗ್, ಟಿಮ್ ಡೇವಿಡ್, ಕಿರಾನ್ ಪೆÇಲಾರ್ಡ್, ಡೇನಿಯಲ್ ಸ್ಯಾಮ್ಸ್‍ಘಿ, ಮುರುಗನ್ ಅಶ್ವಿನ್, ಕುಮಾರ್ ಕಾರ್ತಿಕೇಯಾ, ಜಸ್ಪ್ರೀತ್ ಬುಮ್ರಾ, ರಿಲೆ ಮೆರ್ಡಿತ್. 

ಚೆನ್ನೈ ತಂಡ: ಋತುರಾಜ್ ಗಾಯಕ್ವಾಡ್, ಡೇವೊನ್ ಕಾನ್ವೆ, ಶಿವಂ ದುಬೆ, ಅಂಬಾಟಿ ರಾಯ್ಡು, ಎಂಎಸ್.ಧೋನಿ, ಮೊಯಿನ್ ಅಲಿ, ರಾಬಿನ್ ಉತ್ತಪ್ಪ/ ರವೀಂದ್ರ ಜಡೇಜಾ , ಡ್ವೇನ್ ಬ್ರಾವೋ, ಸೀಮರ್‍ಜೀತ್ ಸಿಂಗ್, ಮಹೇಶ್ ತೀಕ್ಷ್ಣ, ಮುಖೇಶ್ ಚೌಧರಿ. 

 

 

 

 

 

- Advertisement -

Latest Posts

Don't Miss