ಮುಂಬೈ:ಡೇವೊನ್ ಕಾನ್ವೆ ಅವರ ಸೊಗಸಾದ ಬ್ಯಾಟಿಂಗ್ ಹಾಗೂ ಮೊಯಿನ್ ಅಲಿ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಚೆನ್ನೈ ತಂಡ ಡೆಲ್ಲಿ ವಿರುದ್ಧ 91 ರನ್ ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ.
ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ದುಕೊಂಡಿತು. ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕ್ವಾಡ್ ಮೊದಲ ವಿಕೆಟ್ಗೆ 110 ರನ್ ಗಳ ಭರ್ಜಿ ಆರಂಭ ನೀಡಿದರು.
41 ರನ್ ಗಳಿಸಿದ್ದ ಋತುರಾಜ್ ನಾರ್ಟ್ಜೆಗೆ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 32 ರನ್, ಅಂಬಾಟಿ ರಾಯ್ಡುಗೆ 5 ರನ್ ಗಳಿಸಿದರು. ಮೊಯಿನ್ ಅಲಿ 9 ರನ್ ಗಳಿಸಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ಡೆವೊನ್ ಕಾನ್ವೆ 27 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.
ಧೋನಿ ಅಜೇಯ 21,ಮೊಯಿನ್ ಅಲಿ 9, ಡ್ವೇನ್ ಬ್ರಾವೋ ಅಜೇಯ 1ರನ್ ಗಳಿಸಿದರು. ಚೆನ್ನೈ ತಂಡ ನಿಗದಿತ 20 ಓವರ್ಗಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಕಲೆ ಹಾಕಿತು.ವೇಗಿ ಅನ್ರಟ್ಜ್ ನೊರ್ಟ್ಜೆ 3 ವಿಕೆಟ್ ಪಡೆದರು.
209 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಸ್ಪಿನ್ನರ್ ಮೊಯಿನ್ ಅಲಿ ದಾಳಿಗೆ ತತ್ತರಿಸಿ ಹೋಯ್ತು. ಡೇವಿಡ್ ವಾರ್ನರ್ 19, ಶ್ರೀಕರ್ ಭರತ್ 8,ಮಿಚೆಲ್ ಮಾರ್ಷ್ 25, ರಿಷಭ್ ಪಂತ್ 21, ರೊವಮನ್ ಪೊವೆಲ್ 21, ರಿಪಲ್ ಪಟೇಲ್ 6, ಅಕ್ಷರ್ ಪಟೇಲ್ 1, ಶಾರ್ದೂಲ್ ಠಾಕೂರ್ 24,ಕುಲ್ದೀಪ್ ಯಾದವ್ 5 ರನ್ ಗಳಿಸಿದರು.
ಡೆಲ್ಲಿ ತಂಡ 17.4 ಓವರ್ಗಳಲ್ಲಿ 117 ರನ್ ಗಳಿಗೆ ಸರ್ವ ಪತನ ಕಂಡಿತು. ಚೆನ್ನೈ ಪರ ಮೊಯಿನ್ ಅಲಿ 3, ಡ್ವೆನ್ ಬ್ರಾವೊ, ಸಿಮರ್ಜಿತ್ ಸಿಂಗ್ , ಮುಕೇಶ್ ಚೌಧರಿ ತಲಾ 2 ವಿಕೆಟ್ ಪಡೆದರು. ಡೆವೊನ್ ಕಾನ್ವೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

