ಮುಂಬೈ: ಐಪಿಎಲ್‍ನ 41ನೇ ಪಂದ್ಯದಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಕದನ ಉಭಯ ತಂಡಗಳಿಗೆ ಗೆಲುವು ಮುಖ್ಯವಾಗಿದೆ. ಡೆಲ್ಲಿ ತಂಡ ನೋ ಬಾಲ್ ವಿವಾದದಿಂದ ಹೊರ ಬಂದು ಇದೀಗ ಮತ್ತೊಮ್ಮೆ ಕೋಲ್ಕತ್ತಾ ತಂಡವನ್ನು ಎದುರಿಸಲಿದೆ.
ಮೊನ್ನೆ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ 15ರನ್‍ಗಳಿಂದ ವಿರೋಚಿತವಾಗಿ ಸೋತಿತ್ತು. ನೋ ಬಾಲ್ ವಿವಾದ ತಂಡದ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರನ್ನು ಒಂದು ಪಂದ್ಯದಿಂದ ನಿಷೇಧ ಮಾಡಿತು.
ಮುಖ್ಯ ಕೋಚ್ ರಿಕಿ ಪಾಂಟಿಂಗ್ ಕ್ವಾರೈಂಟನ್‍ನಲ್ಲಿದ್ದಿದ್ದರಿಂದ ಅಸಹಾಯಕರಾಗಿದ್ದರು. ಇದೀಗ ತಂಡಕ್ಕೆ ಮತ್ತೆ ಮರಳಿದ್ದಾರೆ.
ಡೆಲ್ಲಿ 7ಪಂದ್ಯಗಳಿಂದ 3ರಲ್ಲಿ ಗೆದ್ದು 4ರಲ್ಲಿ ಸೋತು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಕೋಲ್ಕತ್ತಾ ತಂಡ 8ಪಂದ್ಯಗಳಿಂದ 3ರಲ್ಲಿ ಗೆದ್ದು 5ರಲ್ಲಿ ಸೋತು ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಇತ್ತಿಚೆಗೆ ಕೋಲ್ಕತ್ತಾ ವಿರುದ್ಧ ಡೆಲ್ಲಿ 44 ರನ್ ಗಳ ಗೆಲುವು ದಾಖಲಿಸಿತ್ತು. ಡೆಲ್ಲಿ ವಿರುದ್ಧದ ಪಂದ್ಯ ಶ್ರೇಯಸ್ ಪಡೆಗೆ ಸೇಡಿನ ಕದನವಾಗಿದೆ.
De
ಡೆಲ್ಲಿ ಸತತ ಮೂರು ಅರ್ಧ ಶತಕಗಳನ್ನು ಸಿಡಿಸಿದ್ದ ಡೇವಿಡ್ ವಾರ್ನರ್ ಮತ್ತೆ ಸಿಡಿಯಬೇಕಿದೆ. ಪೃಥ್ವಿ ಶಾ ದೊಡ್ಡ ಆರಂಭವನ್ನು ನೀಡಬೇಕಿದೆ.
ಮೂರನೆ ಕ್ರಮಾಂಕದಲ್ಲಿ ಆಡುತ್ತಿರುವ ರ್ಸಾರಾಜ್ ಖಾನ್ ವೈಫಲ್ಯ ಅನುಭವಿಸುತ್ತಿರುವುದರಿಂದ ಅವಕಾಶ ಮತ್ತೆ ಸಿಗುವುದು ಅನುಮಾನದಿಂದ ಕೂಡಿದೆ.
ನಾಯಕ ರಿಷಭ ಪಂತ್‍ಗೆ ದೊಡ್ಡ ಜವಾಬ್ದಾರಿ ಯಿದೆ. ಇವರಿಗೆ ಆಲ್ರೌಂಡರ್‍ಗಳಾದ ಲಲಿತ್ ಯಾದವ್, ಶಾರ್ದೂಲ್ ಠಾಕೂರ್ ಹಾಗೂ ಅಕ್ಷರ್ ಪಟೇಲ್ ಸಾಥ್ ಕೊಡಬೇಕಿದೆ.
ಡೆಲ್ಲಿ ಬೌಲಿಂಗ್ ಚೆನ್ನಾಗಿದೆ ಆದರೆ ಮೊನ್ನೆ ಜೋಸ್ ಬಟ್ಲರ್ ಎದುರು ಡೆಲ್ಲಿ ಬೌಲರ್‍ಗಳು ದುಬಾರಿಯಾಗಿದ್ದರು. ಖಲೀಲ್ ಅಹ್ಮದ್ ಆರಂಭದಲ್ಲಿ ಆರ್ಭಟಿಸಿದರೆ ಮುಸ್ತಾಫಿಜುರು ರೆಹಮಾನ್ ಡೆತ್ ಓವರ್‍ನಲ್ಲಿ ಮಿಂಚುತ್ತಿದ್ದಾರೆ.
ಇನ್ನು ಸ್ಪಿನ್ನರ್‍ಗಳಾದ ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ಲಲಿತ್ 20 ವಿಕೆಟ್ ಪಡೆದು ತಂಡಕ್ಕೆ ನೆರವಾಗಿದ್ದಾರೆ.
ಕೆಕೆಆರ್‍ಗೆ ಬ್ಯಾಟಿಂಗ್ ಚಿಂತೆ
ಇನ್ನು ಕೋಲ್ಕತ್ತಾ ತಂಡದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಸೇರಿ ಬ್ಯಾಟರ್‍ಗಳು ಸುಧಾರಿಸಬೇಕು. ಸ್ಯಾಮ್ ಬಿಲ್ಲಿಂಗ್ಸ್ ಹಾಗೂ ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿದರೆ ಆಕ್ರಮಣಕಾರಿ ಆರಂಭ ನೀಡಬೇಕಾಗುತ್ತದೆ. ಶ್ರೇಯಸ್, ನಿತೀಶ್ ರಾಣಾ, ರಿಂಕು ಸಿಂಗ್, ವೆಂಕಟೇಶ್ ಅಯ್ಯರ್‍ಗೆ ಡೆಲ್ಲಿ ಸ್ಪಿನ್ನರಸ್‍ಗಳು ಕಠಿಣ ಸವಾಲು ಹಾಕಲಿದ್ದಾರೆ. ಕೆಕೆಆರ್ ವೇಗಿಗಳಾದ ಉಮೇಶ್ ಯಾದವ್, ಟಿಮ್ ಸೌಥಿ ಚೆನ್ನಾಗಿ ಆಡುತ್ತಿದ್ದಾರೆ ವರುಣ್ ಚಕ್ರವರ್ತಿ ನಿರಾಸೆ ಮೂಡಿಸಿದ್ದಾರೆ.
ಡೆಲ್ಲಿ ತಂಡ: ಪೃಥ್ವಿ ಶಾ, ಡೇವಿಡ್ ವಾರ್ನರ್, ರ್ಸಾರಾಜ್ ಖಾನ್, ರಿಷಭ ಪಂತ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ರೊವಮನ್ ಪೊವೆಲ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಖಲೀಲ್ ಅಹ್ಮದ್.
ಕೋಲ್ಕತ್ತಾ ತಂಡ: ಸ್ಯಾಮ್ ಬಿಲ್ಲಿಂಗ್ಸ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸ್ಸೆಲ್, ಶಿವಂ ಮಾವಿ, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ.