ಮುಂಬೈ: ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಕೋಲ್ಕತ್ತಾ ವಿರುದ್ಧ 44 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಲ್ಲಿನ ಬ್ರಾಬೊರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ ಹಾಗೂ ಡೇವಿಡ್ ವಾರ್ನರ್ ಮೊದಲ ವಿಕೆಟ್‍ಗೆ 93 ರನ್‍ಗಳ ಭರ್ಜರಿ ಆರಂಭ ನೀಡಿದರು.
ಪೃಥ್ವಿ ಶಾ 27 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಡೇವಿಡ್ ವಾರ್ನರ್ 35 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ರಿಷಭ್ ಪಂತ್ 27, ಲಲಿತ್ ಯಾದವ್ 1, ರೊವಮನ್ ಪೊವೆಲ್8, ಅಕ್ಷರ್ ಪಟೇಲ್ 22, ಶಾರ್ದೂಲ್ ಠಾಕೂರ್ 29ಮ ಡೇವಿಡ್ ವಾರ್ನರ್ ಒಟ್ಟು 61 ರನ್ ಕಲೆ ಹಾಕಿದರು. ಡೆಲ್ಲಿ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಪೇರಿಸಿತು.
ಬೃಹತ್ ಮೊತ್ತ ಬೆನ್ನತ್ತಿದ ಕೋಲ್ಕತ್ತಾಕ್ಕೆ ಒಳ್ಳೆಯ ಆರಂಭ ಸಿಗಲಿಲ್ಲ. ರಹಾನೆ 8, ವೆಂಕಟೇಶ್ ಅಯ್ಯರ್ 18, ನಾಯಕ ಶ್ರೇಯಸ್ ಅಯ್ಯರ್ 54, ನಿತೀಶ್‍ರಾಣಾ 30, ಆಂಡ್ರೆ ರಸ್ಸೆಲ್ 24, ಸಾಮ್ ಬಿಲ್ಲಿಂಗ್ಸ್ 15 ರನ್ ಗಳಿಸಿದರು.
ಕೆಕೆಆರ್ 19.4 ಓವರ್‍ಗಳಲ್ಲಿ 171 ರನ್ ಗಳಿಸಿತು. 4ವಿಕೆಟ್ ಪಡೆದ ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಪಡೆದರು. ಖಲೀಲ್ ಅಹಮದ್ 3 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ 2 ವಿಕೆಟ್ ಪಡೆದರು.