ಮುಂಬೈ:ಶಾರ್ದೂಲ್ ಠಾಕೂರ್ ಅವರ ಮಾರಕ ದಾಳಿ ಹಾಗೂ ಮಿಚೆಲ್ ಮಾರ್ಷ್ ಅವರ ಆಕರ್ಷಕ ಅರ್ಧ ಶತಕದ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ವಿರುದ್ಧ 17 ರನ್ ಗಳ ಗೆಲುವು ದಾಖಲಿಸಿ ಪ್ಲೇ ಆಫ್ಗೆ ಮತ್ತಷ್ಟು ಹತ್ತಿರವಾಗಿದೆ.
ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು.
ಡೆಲ್ಲಿ ಪರ ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ (0), ಸರ್ಫಾರಾಜ್ ಖಾನ್ (32), ಮಿಚೆಲ್ ಮಾರ್ಷ್ (63),ಲಲಿತ್ ಯಾದವ್ 24, ರಿಷಭ್ ಪಂತ್ 7, ರೊವಮನ್ ಪೊವೆಲ್ 2, ಅಕ್ಷರ್ ಪಟೇಲ್ ಅಜೇಯ 17, ಶಾರ್ದೂಲ್ ಠಾಕೂರ್ 3, ಕುಲದೀಪ್ ಯಾದವ್ 2 ರನ್ ಗಳಿಸಿದರು.
ಡೆಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಪೇರಿಸಿತು. ಪಂಜಾಬ್ ಪರ ಲಿಯಾಮ್ ಲಿವಿಂಗ್ ಸ್ಟೋನ್ 3 ವಿಕೆಟ್ ಪಡೆದು ಮಿಂಚಿದರು.
160 ರನ್ ಗುರಿ ಬೆನ್ನತ್ತಿದ ಪಂಜಾಬ್ ತಂಡ ಡೆಲ್ಲಿ ವೇಗಿಗಳಾದ ನೊರ್ಟ್ಜೆ ಹಾಗೂ ಶಾರ್ದೂಲ್ ಠಾಕೂರ್ ದಾಳಿಗೆ ತತ್ತರಿಸಿ ಹೋಯಿತು.
ಜಾನಿ ಭೈರ್ ಸ್ಟೋ 28, ಶಿಖರ್ ಧವನ್ 19, ಭಾನುಕಾ ರಾಜಪಕ್ಸ್ 4, ಲಿಯಾಮ್ ಲಿವಿಂಗ್ ಸ್ಟೋನ್ 3, ಮಯಾಂಕ್ ಅಗರ್ವಾಲ್ 0, ಜಿತೇಶ್ ಶರ್ಮಾ 44, ಹರಪ್ರೀತ್ ಬ್ರಾರ್ 1, ರಿಷಿಧವನ್ 4, ರಾಹುಲ್ ಚಾಹರ್ 25, ರಬಾಡ 6, ಆರ್ಷದೀಪ್ ಅಜೇಯ 2 ರನ್ ಗಳಿಸಿದರು.
ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು. ಡೆಲ್ಲಿ ಪರ ಶಾರ್ದೂಲ್ ಠಾಕೂರ್ 4 ವಿಕೆಟ್, ಅಕ್ಷರ್ ಪಟೇಲ್ ಹಾಗೂ ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.