ಮುಂಬೈ: ಐಪಿಎಲ್ ನ ಸೂಪರ್ ಸಂಡೆಯ 45ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಲಕ್ನೊ ಸೂಪರ್ ಜೈಂಟ್ಸ್ ಎದುರಿಸಲಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳ ಕದನ ಕುತೂಹಲ ಕೆರೆಳಿಸಿದೆ. ಎರಡೂ ತಂಡಗಳೂ ಗೆಲುವಿನೊಂದಿಗೆ ಬಂದು ಮುಖಾಮುಖಿಯಾಗುತ್ತಿವೆ.
ಡೆಲ್ಲಿ ತಂಡ 8 ಪಂದ್ಯಗಳಿಂದ 4 ಪಂದ್ಯಗಳನ್ನು ಗೆದ್ದು 4 ಪಂದ್ಯಗಳನ್ನು ಸೋತು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೆ ಸ್ಥಾನದಲ್ಲಿದೆ.
ಲಕ್ನೊ ತಂಡ 9 ಪಂದ್ಯಗಳಿಂದ 6 ಪಂದ್ಯಗಳನ್ನು ಗೆದ್ದು 3ರಲ್ಲಿ ಸೋತು 12 ಅಂಕಗಳೊಂದಿಗೆ ಮೂರನೆ ಸ್ಥಾನದಲ್ಲಿದೆ. ಲಕ್ನೊ ತಂಡ ಈ ಪಂದ್ಯವನ್ನು ಗೆದ್ದರೆ ಪ್ಲೇ ಆಫ್ ಸನಿಹಕ್ಕೆ ಸಾಗಲಿದೆ.
ಡೆಲ್ಲಿ ತಂಡ ಪ್ಲೇ ಆಫ್ ಕನಸು ಕಾಣುತ್ತಿದ್ದು ಈ ಪಂದ್ಯವನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕೋಲ್ಕತ್ತಾ ವಿರುದ್ಧ ಕಠಿಣ ಸಂದರ್ಭವನ್ನು ಎದುರಿಸಿ ಗೆದ್ದಿತ್ತು.
ಕುಲ್ದೀಪ್ ಕೇವಲ ಮೂರು ಓವರ್ ಮಾಡಿ ನಾಲ್ಕು ವಿಕೆಟ್ ಪಡೆದಿದ್ದರು. ಮಿಚೆಲ್ ಮಾರ್ಷ್ ಫಾರ್ಮಗೆ ಮರಳ ಬೇಕಿದೆ. ಚೇತನ್ ಸಾಕಾರಿಯಾ ಅವರನ್ನು ತಂಡವನ್ನು ಸೇರಿಸಿಕೊಂಡಿರುವುದರಿಂದ ತಂಡಕ್ಕೆ ಬಳ ಬಂದಿದೆ.
ಲಕ್ನೊ ತಂಡ ನಾಯಕ ಕೆ,ಎಲ್.ರಾಹುಲ್ ವೈಫಲ್ಯ ಅನುಭವಿಸಿದ್ದರೂ ಈ ಪಂದ್ಯದಲ್ಲಿ ರಾಹುಲ್ ಫಾರ್ಮಗೆ ಮರಳಬಹುದಾಗಿದೆ. ಮೋಶಿನ್ ಖಾನ್ ಅವರನ್ನು ಲಕ್ನೊ ಆಡುವ ಹನ್ನೊಂದರ ಬಳಗದಲ್ಲಿ ಸೇರಿಕೊಂಡು ತಂಡಕ್ಕೆ ಹೊಸ ಚೈತನ್ಯ ನೀಡಿದ್ದಾರೆ.
ವೇಗಿ ಆವೇಶ್ ಖಾನ್ ತಂಡದ ಗೆಲುವಿನಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ, 8 ಪಂದ್ಯಗಳಿಂದ 11 ವಿಕೆಟ್ ಪಡೆದಿದ್ದಾರೆ.