Sunday, September 8, 2024

Latest Posts

ಲಕ್ನೊ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಡೆಲ್ಲಿ ?

- Advertisement -

ಮುಂಬೈ:ಐಪಿಎಲ್‍ನ 15ನೇ ಪಂದ್ಯದಲ್ಲಿಂದು ಲಕ್ನೋ ಸೂಪರ್ ಜೈಂಟ್ಸ್‍ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಹಾಕಿದೆ.


ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿಗಾಗಿ ಹೋರಾಡಲಿವೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಎರಡನೆ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲು ಕಂಡಿತು.
ಇನ್ನು ಕೆ,ಎಲ್.ರಾಹುಲ್ ನೇತೃತ್ವದ ಲಕ್ನೋ ತಂಡ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತಿತ್ತು. ನಂತರ ಚೆನ್ನೈ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಮೊನ್ನೆ ಸನ್‍ರೈಸರ್ಸ್ ವಿರುದ್ಧ ರೋಚಕ ಗೆಲುವ ಪಡೆದಿತ್ತು.

ಇಂದಿನ ಪಂದ್ಯದಲ್ಲಿ ರಿಷಭ್ ಪಂತ್ ನೇತೃಥ್ವದ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೊ ತಂಡದ ಗೆಲುವಿನ ಓಟಕ್ಕೆ ಲಾಗಮು ಹಾಕಲೇ ಬೇಕಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಬಂದಿರೋದು ನೂರಾನೆ ಬಲಿ ಬಂದಿದೆ. ಜೊತೆಗೆ ಆಲ್ರೌಂಡರ್ ಅನರಿಚ್ ನೋಟ್ರ್ಜೆ ಲಭ್ಯ ಇರೋದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನು ಲಕ್ನೊ ತಂಡ ಸತತ ಎರಡು ಪಂದ್ಯಗಳನ್ನ ಗೆದ್ದುಕೊಂಡಿರುವುದರಿಂದ ಆತ್ಮ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.

ಡೆಲ್ಲಿ ತಂಡದಲ್ಲಿ ಆರಂಭಿಕರಾದ ಪೃಥ್ವಿ ಶಾ, ಮಂದೀಪ್ ಸಿಂಗ್ಬ್ಯಾಟಿಂಗ್‍ನಲ್ಲಿ ಅಬ್ಬರಿಸಬೇಕಿದೆ. ನಾಯಕ ರಿಷಭ್ ಪಂತ್ ಕೆಟ್ಟ ಹೊಡೆತಗಳಿಗೆ ಕೈ ಹಾಕದೆ ಎಚ್ಚರಿಕೆಯಿಂದ ಆಡಬೇಕಿದೆ. ಲಲಿತ್ ಯಾದವ್, ರೊವಮನ್ ಪೊವೆಲ್ ಮ್ಯಾಚ್ ಫಿನಿಶರ್‍ಗಳಾಗಬೇಕಿದೆ.

ಬೌಲಿಂಗ್‍ನಲ್ಲಿ ವೇಗಿ ಮುಸ್ತಾಫಿಜುರ್ ರೆಹಮಾನ್,ಕುಲ್‍ದೀಪ್ ಯಾದವ್ ಮಿಂಚಿದ್ದಾರೆ. ವೇಗಿಗಳಾದ ಶಾರ್ದೂಲ್ ಠಾಕೂರ್, ಖಲೀಲ್ ಅಹಮದ್, ಅಕ್ಷರ್ ಪಟೇಲ್ ವಿಕೆಟ್ ಪಡೆಯಬೇಕಿದೆ.

ಲಕ್ನೊ ತಂಡದಲ್ಲಿ ಓಪನರ್ ಕ್ವಾಂಟಾನ್ ಡಿಕಾಕ್, ಎವಿನ್ ಲಿವೀಸ್, ಮನೀಶ್ ಪಾಂಡೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ಆಯುಶ್ ಬಡೋನಿ, ಕೃಣಾಲ್ ಪಾಂಡ್ಯ ಜಾಸನ್ ಹೋಲ್ಡರ್ ತಂಡದ ಸ್ಕೋರ್ ಹೆಚ್ಚಿಸಬೇಕಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಆಂಡ್ರಿವ್ ಟೈ ಹಾಗೂ ಸ್ಪಿನ್ನರ್ ರವಿ ಬಿಷ್ಣೊಯಿ ಎದುರಾಳಿ ಬ್ಯಾಟರ್‍ಗಳನ್ನು ಕಾಡಬೇಕಿದೆ. ಲಕ್ನೊ ತಂಡ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ್ದು ಗೆಲುವು ಯಾರ ಪಾಲಾಗುತ್ತದೆ ಅನ್ನೋದನ್ನ ಕಾದುನೋಡಬೇಕಿದೆ.

- Advertisement -

Latest Posts

Don't Miss