ಮುಂಬೈ: ಸ್ಪಿನ್ನರ್ ಕುಲ್ದೀಪ್ ಅವರ ಸ್ಪಿನ್ ಮ್ಯಾಜಿಕ್ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೋಲ್ಕತ್ತಾ ವಿರುದ್ಧ 4 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ಕೋಲ್ಕತ್ತಾ ಪರ ಆರಂಭಿಕರಾಗಿ ಕಣಕ್ಕಿಳಿದ ಆರಾನ್ ಫಿಂಚ್ (3) ಹಾಗೂ ವೆಂಕಟೇಶ್ ಅಯ್ಯರ್ (6) ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ಏಕಾಂಗಿ ಹೋರಾಟ ನಡೆಸಿದ ಶ್ರೇಯಸ್ ಅಯ್ಯರ್ 42, ಬಾಬಾ ಇಂದ್ರಜೀತ್ 6, ಸುನಿಲ್ ನರೈನ್ 0, ಕೆಳಕ್ರಮಾಂಕದಲ್ಲಿ ಬಂದ ನಿತೀಶ್ ರಾಣಾ 57, ರಿಂಕು ಸಿಂಗ್ 23 ರನ್ ಗಳಿಸಿದರು.
ಕೋಲ್ಕತ್ತಾ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಪೇರಿಸಿತು. ಡೆಲ್ಲಿ ಪರ ಕುಲದೀಪ್ ಯಾದವ್ 4, ಮುಸ್ತಾಫಿಜುರು ರೆಹಮಾನ್ 3 ವಿಕೆಟ್ ಪಡೆದರು.
147 ರನ್ ಗುರಿ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ವೇಗಿ ಉಮೇಶ್ ಯಾದವ್ ಪೃಥ್ವಿ ಶಾ 0, ಡೇವಿಡ್ ವಾರ್ನರ್ 42, ಪೆವಲಿಯನ್ ಅಟ್ಟಿದರು.
ಮಿಚೆಲ್ ಮಾರ್ಷ 13, ಲಲಿತ್ ಯಾದವ್ 22, ರಿಷಭ್ ಪಂತ್ 2, ರೊವಮನ್ ಪೊವೆಲ್ ಅಜೇಯ 33, ಅಕ್ಷರ್ ಪಟೇಲ್ 24, ಶಾರ್ದೂಲ್ ಠಾಕೂರ್ ಅಜೇಯ 8 ರನ್ ಕಲೆ ಹಾಕಿದರು.
ಡೆಲ್ಲಿ 19 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಕಲೆ ಹಾಕಿತು. ಕೋಲ್ಕತ್ತಾ ಪರ ಉಮೇಶ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು.