Sunday, September 8, 2024

Latest Posts

ಮಾರ್ಷ್ ಆರ್ಭಟ : ರಾಜಸ್ಥಾನ ಕಂಗಾಲ್

- Advertisement -

ಮುಂಬೈ:ಮಿಚೆಲ್ ಮಾರ್ಷ್ (89) ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ ಡೆಲ್ಲಿ ತಂಡಕ್ಕೆ 161 ರನ್ ಗುರಿ ನೀಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಶ್ರೀಕರ್ ಭರತ್ ಬೌಲ್ಟ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಮೂರನೆ ಕ್ರಮಾಂಕದಲ್ಲಿ ಬಂದ ಮಿಚೆಲ್ ಮಾರ್ಷ್ ಡೇವಿಡ್ ವಾರ್ನರ್ಗೆ ಒಳ್ಳೆಯ ಸಾಥ್ ಕೊಟ್ಟರು.

ರಾಜಸ್ಥಾನ ಬೌಲರ್ಗಳನ್ನ ಚೆಂಡಾಡಿದ ಮಿಚೆಲ್ ಮಾರ್ಷ್ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದು 38 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಡೇವಿಡ್ ವಾರ್ನರ್ 41 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.  ಮಾರ್ಷ್ ಒಟ್ಟು 62 ಎಸೆತದಲ್ಲಿ 5 ಬೌಂಡರಿ 7 ಸಿಕ್ಸರ್ ನೆರೆವಿನಿಂದ 89 ರನ್ ಗಳಿಸಿ ಚಾಹಲ್ಗೆ ವಿಕೆಟ್ ಒಪ್ಪಿಸಿದರು.

ವಾರ್ನರ್ ಅಜೇಯ 52, ರಿಷಭ್ ಪಂತ್ ಅಜೇಯ 13 ರನ್ ಗಳಿಸಿದರು. ಡೆಲ್ಲಿ ತಂಡ 18.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 161 ರನ್ ಕಲೆ ಹಾಕಿತು.

ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ರಾಜಸ್ಥಾನಕ್ಕೆ ಒಳ್ಳೆಯ ಆರಂಭ ಸಿಗಲಿಲ್ಲ. ಯಶಸ್ವಿ ಜೈಸ್ವಾಲ್ 19,ಜೋಸ್ ಬಟ್ಲರ್ 7, ಆರ್ .ಅಶ್ವಿನ್ 50, ದೇವದತ್ ಪಡಿಕಲ್ 48,ಸಂಜು  ಸ್ಯಾಮ್ಸನ್ 6,ರಿಯಾನ್ ಪರಾಗ್ 9, ರನ್ ವೆನ್ ಡುಸೆನ್ ಅಜೇಯ 12, ಟ್ರೆಂಟ್ ಬೌಲ್ಟ್ ಅಜೇಯ 3 ರನ್ ಗಳಿಸಿದರು.

ರಾಜಸ್ಥಾನ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಡೆಲ್ಲಿ ತಂಡದ ಮಿಚೆಲ್ ಮಾರ್ಷ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

- Advertisement -

Latest Posts

Don't Miss