Sunday, June 1, 2025

Latest Posts

ಪ್ಲೇ ಆಫ್ ಪ್ರವೇಶಿಸಲು ಇಂದು ಲಕ್ನೊ, ಟೈಟಾನ್ಸ್ ಫೈಟ್ 

- Advertisement -

ಪುಣೆ: ಸತತ ಸೋಲುಗಳಿಂದ ಕಂಗೆಟ್ಟಿರುವ ಗುಜರಾತ್ ಟೈಟಾನ್ಸ್  ಇಂದು ಬಲಿಷ್ಠ ತಂಡ ಲಕ್ನೊ ತಂಡವನ್ನು ಎದುರಿಸಲಿದ್ದು  ಪ್ಲೇ ಆಫ್ಗೆ ಹೋಗುವ ಕನಸು ಕಾಣುತ್ತಿದೆ.

ಮಂಗಳವಾರ ಇಲ್ಲಿನ  ಎಂಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯ ಕೂತೂಹಲ ಕೆರೆಳಿಸಿದೆ. ಟೂರ್ನಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಿರುವ ಉಭಯ ತಂಡಗಳು ಮೊದಲ ಆವೃತ್ತಿಯಲ್ಲೆ ಪ್ಲೇ ಆಫ್ ಕನಸು ಕಾಣುತ್ತಿವೆ.

ಟೂರ್ನಿವುದ್ದಕ್ಕೂ ಅಂಕಪಟ್ಟಿಯಲ್ಲಿ ಗುಜರಾತ್ ಅಗ್ರಸ್ಥಾನದಲ್ಲಿತ್ತು. ಇದೀಗ ಲಕ್ನೊ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಸತತ ಗೆಲುವಿನಿಂದ ಬೀಗುತ್ತಿದ್ದ  ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡ ಕಳೆದ ವಾರ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿತು.

ಎರಡೂ ತಂಡಗಳು 11 ಪಂದ್ಯಗಳಿಂದ 16 ಅಂಕಗಳಿಸಿ ಮುಂದಿನ ಹಂತಕ್ಕೆ ಹೋಗಲು ಈ ಪಂದ್ಯ ನಿರ್ಧಾರ ಮಾಡಲಿದೆ.

ಕೆ.ಎಲ್.ರಾಹುಲ್ ನೇತೃತ್ವದ ಲಕ್ನೊ ತಂಡ ಮೊನ್ನೆ ಕೋಲ್ಕತ್ತಾ ವಿರುದ್ಧ 75 ರನ್ ಗೆಲುವು ದಾಖಲಿಸಿತ್ತು. ಸತತ ನಾಲಕು ಪಂದ್ಯಗಳನ್ನು ಗೆದ್ದು  ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಲಕ್ನೊ ನಾಯಕ ಕೆ.ಎಲ್.ರಾಹುಲ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ರಾಹುಲ್ 11 ಪಂದ್ಯಗಳಿಂದ 2 ಶತಕ ಸೇರಿ 451 ರನ್ ಪೇರಿಸಿದ್ದಾರೆ.

ಲಕ್ನೊ ತಂಡ ರಾಹುಲ್ ಅವರನ್ನೂ ನೆಚ್ಚಿಕೊಂಡಿದೆ. ಕ್ವಿಂಟಾನ್ ಡಿಕಾಕ್, ದೀಪಕ್ ಹೂಡಾ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ.

ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು ಮೊನ್ನೆ ಕೋಲ್ಕತ್ತಾ ತಂಡವನ್ನು 101 ರನ್‍ಗಳಿಗೆ ಅಲೌಟ್ ಮಾಡಿತ್ತು. ವೇಗಿಗಳಾದ ಆವೇಶ್ ಖಾನ್ ಹಾಗೂ ಜಾಸನ್ ಹೋಲ್ಡರ್ ವಿಕೆಟ್‍ಗಳ ಗೊಂಚಲು ಪಡೆಯುತ್ತಿದ್ದಾರೆ.

ಇನ್ನುಳಿದ ಬೌಲರ್‍ಗಳಾದ ವೇಗಿ ಮೊಹ್ಸಿನ್ ಖಾನ್ (5.35),ದುಶ್ಮಾಂತಾ ಚಾಮೀರಾ (7.90), ಕೃಣಾಲ್ ಪಾಂಡ್ಯ (6.64), ರವಿ ಬಿಷ್ಣೊಯಿ (8.23), ಆವೇಶ್ ಖಾನ್ (8.14) ರನ್ ಸರಾಸರಿ ಹೊಂದಿದ್ದಾರೆ.

ಸಾಂಘಿಕ ಹೋರಾಟ ಮಾಡಬೇಕು ಗುಜರಾತ್

ಇನ್ನು ಗುಜರಾತ್ ತಂಡ ಬೃಹತ್ ಮೊತ್ತವನ್ನು ಚೇಸ್ ಮಾಡುವ ಸಾಮಥ್ರ್ಯ ಹೊಂದಿರುವುದರಿಂದ ಕಠಿಣ ಸಂದರ್ಭವನ್ನು ಎದುರಿಸುವ ತಾಕತ್ತು ಹೊಂದಿದೆ. ಮೊನ್ನೆ ಮುಂಬೈ ವಿರುದ್ಧ ಸುಲಭವಾಗಿ ಗೆಲ್ಲುವ ಅವಕಾಶವಿದ್ದರೂ ಗೆಲ್ಲಲಿಲ್ಲ.

ಬ್ಯಾಟಿಂಗ್ ವಿಭಗ ಸ್ಥಿರತೆ ಕಾಣಬೇಕಿದೆ.  ಅಗ್ರ ಕ್ರಮಾಂಕದ ಬ್ಯಾಟರ್‍ಗಳು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು.

ಆರಂಭಿಕ ಬ್ಯಾಟರ್‍ಗಳಾದ ವೃದ್ದಿಮಾನ್ ಸಾಹಾ ಅದ್ಭುತ ಬ್ಯಾಟಿಂಗ್ ಮಾಡಿದರೆ ಶುಭಮನ್ ಗಿಲ್ ಸಿಹಿ ಕಹಿ ಎರಡನ್ನೂ ಅನುಭವಿಸಿದ್ದಾರೆ.

ನಾಯಕ ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ ಡೇವಿಡ್ ಮಿಲ್ಲರ್ ಮಿಂಚು ಹರಿಸಿದ್ದು ಮ್ಯಾಚ್ ವಿನ್ನರ್‍ಗಳಾಗ ಬೇಕಿದೆ.

ಬೌಲಿಂಗ್ ವಿಭಗ ಘಾತಕ ದಾಳಿಯನ್ನು ಹೊಂದಿದೆ. ವೇಗಿ ಮೊಹ್ಮದ್ ಶಮಿ, ಲಾಕಿ ಫರ್ಗ್ಯಸನ್ ಮತ್ತು ರಶೀದ್ ಖಾನ್‍ರಂತಹ  ವಿಶ್ವ ಮಟ್ಟದ ಶ್ರೇಷ್ಠ ಬೌಲರ್‍ಗಳಿದ್ದಾರೆ.

ವೇಗಿ ಶಮಿ ಇತ್ತೀಚೆಗೆ ನಿರೀಕ್ಷೆಗೆ ತಕ್ಕಂತೆ  ಬೌಲಿಂಗ್ ಮಾಡಿಲ್ಲ . ಕಳೆದ ಮೂರು ಪಂದ್ಯಗಳಿಂದ 124 ರನ್ ಕೊಟ್ಟು  2 ವಿಕೆಟ್ ಪಡೆದರು. ಹೊಸ ಚೆಂಡಿನಲ್ಲಿ ಶಮಿ ಕೈಚಳಕ ತೋರಿಸಬಹುದು ಮತ್ತೊರ್ವ ವೇಗಿ Àಗ್ರ್ಯೂಸನ್ ಎಂತಹ ಬಲಿಷ್ಠ ಬ್ಯಾಟರ್‍ಗಳನ್ನು ಪೆವಿಲಿಯನ್‍ಗೆ ಅಟ್ಟುವ ಸಾಮಥ್ರ್ಯ ಹೊಂದಿದ್ದಾರೆ. ರಶೀದ್ ಖಾನ್ ದುಬಾರಿಯಾದರೂ ಹೆಚ್ಚು ಹೆಚ್ಚು ವಿಕೆಟ್ ಪಡೆಯುವ ಸಾಮಥ್ರ್ಯ ಹೊಂದಿದ್ದಾರೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್ : 

ಗುಜರಾತ್ ತಂಡ:  ವೃದ್ದಿಮಾನ್ ಸಾಹಾ, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್,  ಪ್ರದೀಪ್ ಸಾಂಗ್ವಾನ್,ಲಾಕಿ ಫಗ್ರ್ಯೂಸನ್, ಅಲಜಾರಿ ಜೋಸೆï,ಮೊಹ್ಮದ್ ಶಮಿ.

ಲಕ್ನೊ ತಂಡ:  ಕ್ವಿಂಟಾನ್ ಡಿಕಾಕ್ (ವಿಕೆಟ್ ಕೀಪರ್), ಕೆ.ಎಲ್.ರಾಹುಲ್ (ನಾಯಕ), ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಆಯೂಷ್ ಬಡೋನಿ, ಮಾರ್ಕಸ್ ಸ್ಟೋಯ್ನಿಸ್, ಜಾಸನ್ ಹೋಲ್ಡರ್, ದುಶ್ಮಾಂತಾ ಚಾಮೀರಾ, ಆವೇಶ್ ಖಾನ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯಿ.  

 

 

 

 

 

- Advertisement -

Latest Posts

Don't Miss