ಪುಣೆ: ರಶೀದ್ ಖಾನ್ ಅವರ ಅಮೋಘ ಸ್ಪಿನ್ ಮ್ಯಾಜಿಕ್ ಹಾಗೂ ಶುಭಮನ್ ಗಿಲ್ ಅವರ ಆಕರ್ಷಕ ಅರ್ಧ ಶತಕದ ನೆರೆವಿನಿಂದ ಗುಜರಾತ್ ಟೈಟಾನ್ಸ್ ಲಕ್ನೊ ವಿರುದ್ಧ 62 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಟೈಟಾನ್ಸ್ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆದಿದೆ.
ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಆಯ್ದುಕೊಂಡಿತು. ಟೈಟಾನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ದಿಮಾನ್ ಸಾಹಾ ಹಾಗೂ ಶುಭಮನ್ ಗಿಲ್ಲ ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ಸಾಹಾ (5 ರನ್) ಮೊಹ್ಸಿನ್ ಖಾನ್ ಎಸೆತದಲ್ಲಿ ಆವೇಶ್ ಖಾನ್ಗೆ ಕ್ಯಾಚ್ ನೀಡಿ ಹೊರ ನಡೆದರು.
ನಂತರ ದಾಳಿಗಿಳಿದ ವೇಗಿ ಆವೇಶ್ ಖಾನ್ ಮ್ಯಾಥೀವ್ ವೇಡ್ (10 ರನ್) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (11 ರನ್) ಅವರನ್ನು ಬಲಿ ಪಡೆದರು. ಕೊನೆಯಲ್ಲಿ ಬಂದ ಡೇವಿಡ್ ಮಿಲ್ಲರ್ 26, ರಾಹುಲ್ ತೆವಾಟಿಯಾ ಅಜೇಯ 22 ರನ್ ಗಳಿಸಿದರು.
ಗುಜರಾತ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಲಕ್ನೊ ಪರ ಆವೇಶ್ ಖಾನ್ 2, ಮೊಹ್ಸಿನ್ ಖಾನ್ ಹಾಗೂ ಜಾಸನ್ ಹೋಲ್ಡ್ ರ್ ತಲಾ ಒಂದು ವಿಕೆಟ್ ಪಡೆದರು.
145 ರನ್ ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಲಕ್ನೊ ತಂಡ ಮಿಸ್ಟ್ರಿ ಸ್ಪಿನ್ನರ್ ರಶೀದ್ ಖಾನ್ ಸ್ಪಿನ್ ಜಾದೂಗೆ ತತ್ತರಿಸಿ ಹೋಯಿತು.
ಕ್ವಿಂಟಾನ್ ಡಿಕಾಕ್ (11) ಯಶ್ ದಯಾಳಗೆ ವಿಕೆಟ್ ಒಪ್ಪಿಸಿದರು. ನಾಯಕ ಕೆ.ಎಲ್.ರಾಹುಲ್ (8) ಶಮಿಗೆ ವಿಕೆಟ್ ಒ್ಪಪಿಸಿದರು. 27 ರನ್ ಗಳಿಸಿದ್ದ ದೀಪಕ್ ಹೂಡಾ ರಶೀದ್ ಖಾನ್ಗೆ ಬಲಿಯಾದರು.
ಕರಣ್ ಶರ್ಮಾ(4) ಯಶ್ ದಯಾಳ್ಗೆ ವಿಕೆಟ್ ಒಪ್ಪಿಸಿದರು. ಕೃಣಾಲ್ ಪಾಂಡ್ಯ (5) ಸ್ಟಂಪ್ ಆದರು. ಆಯೂಷ್ ಬಡೋನಿ (8),ಮಾರ್ಕಸ್ ಸ್ಟೋಯ್ನಿಸ್ 2,ಜಾಸನ್ ಹೋಲ್ಡರ್ 1,ಆವೇಶ್ ಖಾನ್ 12 ರನ್ ಗಳಿಸಿದರು.
ಲಕ್ನೊ ತಂಡ 13.5 ಓವರ್ಗಳ್ಲಲಿ 82 ರನ್ ಗಳಿಗೆ ಆಲೌಟ್ ಆಯಿತು. ಅರ್ಧ ಶತಕ ಸಿಡಿಸಿದ ಶುಭಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ರಶೀದ್ ಖಾನ್ 24 ರನ್ ನೀಡಿ 4 ವಿಕೆಟ್ ಪಡೆದರು.
ಯಶ್ ದಯಾಳ್ ಸಾಯಿ ಕಿಶೋರ್ ತಲಾ 2 ವಿಕೆಟ್ ಪಡೆದರು. ಶಮಿ 1 ವಿಕೆಟ್ ಪಡೆದರು.