ಸನ್ ರೈಸರ್ಸ್ ಮುಳುಗಿಸಿದ ಗುಜರಾತ್ ಟೈಟಾನ್ಸ್

ಮುಂಬೈ: ಕೊನೆಯಲ್ಲಿ ರಶೀದ್ ಖಾನ್ ಅವರ ಅದ್ಭುತ ಸಿಕ್ಸರ್ ಗಳ ನೆರೆವಿನಿಂದ ಗುಜರಾತ್ ಟೈಟಾನ್ಸ್ ಬಲಿಷ್ಠ ಸನ್ ರೈಸರ್ಸ್ ವಿರುದ್ಧ  5 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿತು.

ವಾಂಖೆಡೆಯಲ್ಲಿ ನಡೆದ ಹೈವೋಲ್ಟೇಜ್ ಕದನದಲ್ಲಿ ಟಾಸ್ ಗೆದ್ದ ಗುಜರಾತ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು.

ಸನ್ ರೈಸರ್ಸ್ ಪರ ಕಣಕ್ಕಿಳಿದ ಅಭಿಷೇಕ್ ಶರ್ಮಾ 65, ಕೇನ್ ವಿಲಿಯಮ್ಸನ್ 5, ರಾಹುಲ್ ತ್ರಿಪಾಠಿ 16, ಏಡಿನ್ ಮಾರ್ಕರಾಮ್ 56, ನಿಕೊಲೊಸ್ ಪೂರಾನ್ 3, ವಾಷಿಂಗ್ಟನ್ ಸುಂದರ್ 3, ಶಶಾಂಕ್ ಸಿಂಗ್ ಅಜೇಯ 25, ಮಾರ್ಕೊ ಜೆನೆಸೆನ್ ಅಜೇಯ 8 ರನ್ ಗಳಿಸಿದರು. ಸನರೈಸರ್ಸ್ ನಿಗದಿತ 20 ಓವರ್ ಗಳಲ್ಲಿ  6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು.

ಗುಜರಾತ್ ಪರ ಮೊಹ್ಮದ್ ಶಮಿ 3 ವಿಕೆಟ್, ಯಶ್ ದಯಾಳ್ ಹಾಗೂ ಅಲಜಾರಿ ಜೋಸೆಫ್ ತಲಾ 1 ವಿಕೆಟ್ ಪಡೆದರು.

196 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಾಹಾ ಹಾಗೂ ಶುಭಮನ್ ಗಿಲ್ (22) ಮೊದಲ ವಿಕೆಟ್ಗೆ 69 ಸೇರಿಸಿದರು.

ಹಾರ್ದಿಕ್ ಪಾಂಡ್ಯ 10, ಡೇವಿಡ್ ಮಿಲ್ಲರ್ 17, ರಾಹುಲ್ ತೆವಾಟಿಯಾ ಅಜೇಯ 40, ರಶೀದ್ ಖಾನ್ ಅಜೇಯ 31 ರನ್ ಗಳಿಸಿದರು.

ಕೊನೆಯ ಎಸೆತದಲ್ಲಿ ಮೂರು ರನ್ ಬೇಕಿತ್ತು ರಶೀದ್ ಖಾನ್ ಸಿಕ್ಸರ್ ಹೊಡೆದು ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. 5 ವಿಕೆಟ್ ಪಡೆದ ಉಮ್ರಾನ್ ಮಲ್ಲಿಕ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

 

 

 

About The Author