Sunday, September 8, 2024

Latest Posts

ಆಕರ್ಷಕ ಶತಕ ಸಿಡಿಸಿದ ಜೋಸ್ ಬಟ್ಲರ್

- Advertisement -

ಮುಂಬೈ: 15ನೇ ಆವೃತ್ತಿಯ ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಬ್ಯಾಟ್ಸ್‍ಮನ್ ಜೋಸ್ ಬಟ್ಲರ್ ಆಕರ್ಷಕ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಪ್ರಸಕ್ತ ಐಪಿಎಲ್‍ನಲ್ಲಿ ಮೊದಲ ಶತಕ ದಾಖಲಾಗಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಓಪನರ್ ಜೋಸ್ ಬಟ್ಲರ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.


ಮೊದಲಿಗೆ 32 ಎಸೆತದಲ್ಲಿ ಅರ್ಧ ಶತಕ ಸಿಡಿಸಿದ ಜೋಸ್ ಬಟ್ಲರ್ ನಂತರವೂ ಮುಂಬೈ ಬೌಲರ್ಸ್‍ಗಳನ್ನ ಚೆಂಡಾಡಿದರು. ಒಟ್ಟು 66 ಎಸೆತದಲ್ಲಿ ಶತಕ ಸಿಡಿಸಿದರು. ಬಟ್ಲರ್ ಒಟ್ಟು 68 ಎಸೆತ ಎದುರಿಸಿ 11 ಬೌಂಡರಿ 5 ಸಿಕ್ಸರ್ ಸಿಡಿಸಿ 100 ರನ್ ಗಳಿಸಿದರು.
ಈ ಶತಕ ಸಿಡಿಸುವ ಮೂಲಕ ಬಟ್ಲರ್ ಐಪಿಎಲ್‍ನಲ್ಲಿ ಎರಡನೆ ಶತಕ ಸಿಡಿಸಿದ ಇಂಗ್ಲೆಂಡ್‍ನ ಎರಡನೆ ಬ್ಯಾಟ್ಸ್‍ಮನ್ ಎಂಬ ಗೌರವಕ್ಕೆ ಪಾತ್ರರಾದರು. ಈ ಹಿಂದೆ ಇಂಗ್ಲೆಂಡ್‍ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಶತಕ ಸಿಡಿಸಿದ್ದರು.

300ನೇ ಐಪಿಎಲ್ ಆಡುತ್ತಿರುವ ಬಟ್ಲರ್ ಐಪಿಎಲ್‍ನಲ್ಲಿ ಶತಕ ಸಿಡಿಸಿದ 16ನೇ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದ್ರು. ಬಟ್ಲರ್‍ಗೆ ಐಪಿಎಲ್‍ನಲ್ಲಿ ಇದು ಎರಡನೆ ಶತಕವಾಗಿದೆ. ಕಳೆದ ವರ್ಷ ಸನ್‍ರೈಸರ್ಸ್ ಪರ ಆಡಿದ್ದ ಬಟ್ಲರ್ ಡೆಲ್ಲಿ ವಿರುದ್ಧ 124 ರನ್ ಗಳಿಸಿದ್ದರು.

ಶತಕ ಸಿಡಿಸಿದರೂ ಸಂಭ್ರಮಿಸದ ಬಟ್ಲರ್
ಹೌದು ಶತಕ ಸಿಡಿಸಿದರೂ ಜೋಸ್ ಬಟ್ಲರ್ ಸಂಭ್ರಮಿಸಲಿಲ್ಲ. ಇದು ಎಲ್ಲರನ್ನ ಆಶ್ಚರ್ಯವನ್ನುಂಟು ಮಾಡಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನನ್ನ ಕೊಡುಗೆ ಖುಷಿ ನೀಡಿದೆ. ಆದರೆ ನಾವು ದಾಖಲಿಸಿದ ಮೊತ್ತ ಒಳ್ಳೆಯ ಮೊತ್ತ ಹೌದೋ ಅಲ್ಲವೋ ಎನ್ನುವ ಸಂಶಯ ಮೂಡುತ್ತಿದೆ. ಯಾಕಂದರೆ ಟೂರ್ನಿಯಲ್ಲಿ 200 ರನ್‍ಗಳನ್ನು ಚೇಸ್ ಮಾಡಿದ ಉದಾಹರಣೆಗಳಿವೆ ಎಂದು ತಿಳಿಸಿದ್ದಾರೆ.

ಬುಮ್ರಾ ಅವರನ್ನ ಹಾಡಿ ಹೊಗಳಿದ ಬಟ್ಲರ್
ಶತಕ ವೀರ ಬಟ್ಲರ್ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನ ಹಾಡಿ ಹೊಗಳಿದ್ದಾರೆ. ಬುಮ್ರಾ ವಿಶ್ವ ಶ್ರೇಷ್ಠ ಬೌಲರ್. ಈ ಅಂತಾರಾಷ್ಟ್ರೀಯ ಆಟಗಾರರನ್ನ ಎದುರಿಸುವುದು ತುಂಬ ಕಷ್ಟ ಎಂದಿದ್ದಾರೆ. 3 ವಿಕೆಟ್ ಪಡೆದ ಮತ್ತೊಬ್ಬ ಮುಂಬೈ ತಂಡ ತೈಮಲ್ ಮಿಲ್ಸ್ ಅವರನ್ನ ಕೂಡ ಬಟ್ಲರ್ ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

Latest Posts

Don't Miss