Tuesday, April 29, 2025

Latest Posts

ಕಮಿನ್ಸ್ ಆರ್ಭಟಕ್ಕೆ ಮುಂಬೈ ಧೂಳಿಪಟ  

- Advertisement -

ಮುಂಬೈ: ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಗೆಲುವಿನ ಕೇಕೆ ಹಾಕಿ ಸಂಭ್ರಮಿಸಿದೆ. ಕೆಕೆಆರ್ ಗೆಲುವಿಗೆ ಕಾರಣವಾಗಿದ್ದು ಪ್ಯಾಟ್ ಕಮಿನ್ಸ್ ಅವರ ಸ್ಫೋಟಕ ಬ್ಯಾಟಿಂಗ್.

162 ರನ್‍ಗಳ ಗೆಲುವಿನ ಟಾರ್ಗೆಟ್ ಬೆನ್ನತ್ತಿದ ಕೋಲ್ಕತ್ತಾ ತಂಡಕ್ಕೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ತಂಡದ ಓಪನರ್ ಅಜಿಂಕ್ಯ ರಹಾನೆ 7, ನಾಯಕ ಶ್ರೇಯಸ್ ಅಯ್ಯರ್ 10, ಸ್ಯಾಮ್ ಬಿಲ್ಲಿಂಗ್ಸ್ 17,ನಿತೀಸ್ ರಾಣಾ 8, ರಸೆಲ್ 11 ರನ್ ಕಲೆ ಹಾಕಿದ್ದರು. 101 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನೆರೆವಿಗೆ ಬಂದಿದ್ದು ಪ್ಯಾಟ್ ಕಮಿನ್ಸ್.

ಏಳನೆ ಕ್ರಮಾಂಕದಲ್ಲಿ ಬಂದ ಈ ಆಸಿಸ್ ಆಟಗಾರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ರು. ಕೇವಲ 14 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಅದರಲ್ಲೂ ಡೇನಿಯಲ್ ಸ್ಯಾಮ್ಸ್ ಅವರ 16ನೇ ಓವರ್‍ನಲ್ಲಿ 3 ಸಿಕ್ಸರ್ 2 ಬೌಂಡರಿ ಸಿಡಿಸಿದ್ರು. ಕಮಿನ್ಸ್ ಒಟ್ಟು 6 ಸಿಕ್ಸರ್ 4 ಬೌಂಡರಿ ಸಿಡಿಸಿ ಅಜೇಯ 56 ರನ್ ಗಳಿಸಿದರು.

14 ಎಸೆತದಲ್ಲಿ ಅರ್ಧ ಶತಕ ಗಳಿಸಿ ಕೆ.ಎಲ್‍ರಾಹುಲ್ ಅವರ ದಾಖಲೆ ಸಮಗೊಳಿಸಿದರು. 2018ರಲ್ಲಿ ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ಎಸೆತದಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದರು. ವೆಂಕಟೇಶ್ ಅಯ್ಯರ್ 50 ರನ್ ಗಳಿಸಿದರು.

ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಕುರಿತು, ರೋಹಿತ್ ಶರ್ಮಾ ಹೊಗಳಿದ್ದಾರೆ. ಮೊದಲ ಪಂದ್ಯದಲ್ಲೆ ಹೀಗೆ ಆಡುತ್ತಾರೆ ಎಂಬ ಊಹೆ ಇರಲಿಲ್ಲ. ಅವರಿಗೆ ಕ್ರೆಡಿಟ್ ಸಲ್ಲಬೇಕು.15ನೇ ಓವರ್‍ವರೆಗೂ ಪಂದ್ಯ ನಮ್ಮ ಹಿಡಿತದಲ್ಲಿತ್ತು. ಕಮಿನ್ಸ್ ಬಂದು ಗೆಲುವನ್ನು ತಮ್ಮ ಕಡೆಗೆ ತಿರುಗಿಸಿಕೊಂಡರು ಎಂದು ತಿಳಿಸಿದ್ದಾರೆ.

- Advertisement -

Latest Posts

Don't Miss