ಆ್ಯಂಡ್ರೆ ರಸೆಲ್ ಅವರ ಆಲ್ರೌಂಡ್ ಆಟದ ನೆರೆವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 54 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಕೋಲ್ಕತ್ತಾ ಓಪನರ್ ವೆಂಕಟೇಶ್ ಅಯ್ಯರ್ (7) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ನಂತರ ಬಂದ ನಿತೀಶ್ ರಾಣಾ ಸ್ಕೋರ್ ಹೆಚ್ಚಿಸಿದರು. ಈ ವೇಳೆ ದಾಳಿಗಿಳಿದ ಉಮ್ರಾನ್ ಮಲ್ಲಿಕ್ (26), ಅಜಿಂಕ್ಯ ರಹಾನೆ (28), ಶ್ರೇಯಸ್ ಅಯ್ಯರ್ 15 ಪೆವಲಿಯನ್ಗೆ ಅಟ್ಟಿದರು.
ಸ್ಯಾಮ್ ಬಿಲ್ಲಿಂಗ್ಸ್ 34, ರಿಂಕು ಸಿಂಗ್ 5, ಕೊನೆಯಲ್ಲಿ ಬಂದ ಆ್ಯಂಡ್ರೆ ರಸೆಲ್ 28 ಎಸೆತದಲ್ಲಿ 3 ಬೌಂಡರಿ 4 ಸಿಕ್ಸರ್ ಸಿಡಿಸಿ ಅಜೇಯ 49 ರನ್ ಗಳಿಸಿದರು. ಕೋಲ್ಕತ್ತಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ಕಲೆ ಹಾಕಿತು.
ಸನ್ ರೈಸರ್ಸ್ ಪರ ಉಮ್ರಾನ್ ಮಲ್ಲಿಕ್ 3 ವಿಕೆಟ್, ಭುವನೇಶ್ವರ್ ಕುಮಾರ್, ಮಾರ್ಕೊ ಹನ್ಸನ್ ಹಾಗೂ ನಟರಾಜನ್ ತಲಾ 1 ವಿಕೆಟ್ ಪಡೆದರು.
178 ರನ್ಗಳ ಗುರಿ ಬೆನ್ನತ್ತಿದ ಸನ್ ರೈಸರ್ಸ್ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಕೇನ್ ವಿಲಿಯಮ್ಸನ್ (9) ರಸೆಲ್ ಎಸೆತದಲ್ಲಿ ಬೌಲ್ಡ್ ಆದರು.
ರಾಹುಲ್ ತ್ರಿಪಾಠಿ (9), ಏಡಿನ್ ಮಾರ್ಕರಾಮ್ (32), ನಿಕೊಲೊಸ್ ಪೂರಾನ್ 2, ವಾಷಿಂಗ್ಟನ್ ಸುಂದರ್ 4, ಶಶಾಂಕ್ ಸಿಂಗ್ 11, ಮಾರ್ಕೊ ಹನ್ಸನ್ 1, ಭುವನೇಶ್ವರ್ ಕುಮಾರ್ ಅಜೇಯ 6, ಉಮ್ರಾನ್ ಮಲ್ಲಿಕ್ ಅಜೇಯ3 ರನ್ ಗಳಿಸಿದರು.
ಸನ್ ರೈಸರ್ಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 123 ರನ್ ಪೇರಿಸಿತು. ಕೋಲ್ಕತ್ತಾ ಪರ ಆ್ಯಂಡ್ರೆ ರಸೆಲ್ 3, ಟಿಮ್ ಸೌಥಿ 2, ಉಮೇಶ್ ಯಾದವ್, ಸುನಿಲ್ ನರೈನ್ ಹಾಗೂ ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಪಡೆದರು.