ಮುಂಬೈ:ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ಗಳ ಗೆಲುವು ದಾಖಲಿಸಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ಟಾಸ್ ಗೆದ್ದ ಕೋಲ್ಕತ್ತಾ ಫೀಲ್ಡಿಂಗ್ ಆಯ್ದುಕೊಂಡಿತು. ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ದೇವದತ್ ಪಡಿಕಲ್ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ಕೊಡುವಲ್ಲಿ ಎಡವಿದರು.
ದೇವದತ್ ಪಡಿಕಲ್ 2, ಜೋಸ್ ಬಟ್ಲರ್ 22, ಮೂರನೆ ಕ್ರಮಾಂಕದಲ್ಲಿ ಬಂದ ಸಂಜು ಸ್ಯಾಮ್ಸನ್ ಎಚ್ಚರಿಕೆಯ ಆಟವಾಡಿದರು.ಕರುಣ್ ನಾಯರ್ 13, ರಿಯಾನ್ ಪರಾಗ್ 19, ಶಿಮ್ರಾನ್ ಹೇಟ್ಮಯರ್ 27,ಆರ್.ಅಶ್ವಿನ್ ಅಜೇಯ 6 ರನ್ ಗಳಿಸಿದರು.
ಸಂಜು ಸ್ಯಾಮ್ಸನ್ 49 ಎಸೆತ ಎದುರಿಸಿ 7 ಬೌಂಡರಿ 1 ಸಿಕ್ಸರ್ ಸಿಡಿಸಿ ಒಟ್ಟು 54 ರನ್ ಗಳಿಸಿದರು. ರಾಜಸ್ಥಾನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಕಲೆ ಹಾಕಿತು. ಟಿಮ್ ಸೌಥಿ 2 ವಿಕೆಟ್ ಪಡೆದರು.
153 ರನ್ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡ ಓಪನರ್ಗಳಾದ ಆ್ಯರಾನ್ ಫಿಂಚ್ (4ರನ್) ಹಾಗೂ ಬಾಬಾ ಇಂದ್ರಜಿತ್ (15 ರನ್) ಅವರುಗಳ ವಿಕೆಟ್ ಕಳೆದಕೊಂಡು ಸಂಕಷ್ಟದಲ್ಲಿ ಸಿಲುಕಿತು.
ನಂತರ ಬಂದ ಶ್ರೇಯಸ್ ಅಯ್ಯರ್ 34 ರನ್ ಗಳಿಸಿ ಬೌಲ್ಟ್ ಗೆ ಬಲಿಯಾದರು. ಮಧ್ಯಮ ಕ್ರಮಾಂದಲ್ಲಿ ಬಂದ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ರಾಜಸ್ಥಾನ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು.
ನಿತೀಶ್ ರಾಣಾ ಅಜೇಯ 48 ಮತ್ತು ರಿಂಕು ಸಿಂಗ್ ಅಜೇಯ 42 ರನ್ ಗಳಿಸಿದರು. ಕೋಲ್ಕತ್ತಾ ತಂಡ 19.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಸ್ಪೋಟಕ ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.