Sunday, June 22, 2025

Latest Posts

ನೈಟ್ ರೈಡರ್ಸ್‍ಗೆ ಸನ್‍ರೈಸರ್ಸ್ ಸವಾಲ್

- Advertisement -

ಮುಂಬೈ:  ಇಂದು ಐಪಿಎಲ್‍ನ 25ನೇ ಪಂದ್ಯದಲ್ಲಿ  ಬಲಿಷ್ಠ ಕೋಲ್ಕತ್ತಾ ನೈಟ್ ರೈಡರ್ಸ್ ಸನ್‍ರೈಸರ್ಸ್ ತಂಡವನ್ನು ಎದುರಿಸಲಿದೆ.

ಶುಕ್ರವಾರ ಇಲ್ಲಿನ ಬ್ರಾಬೊರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಆರಂಭದ ಎರಡು ಪಂದ್ಯಗಳನ್ನು ಸೋತು ನಂತರ ಪುಟಿದೆದ್ದು ಎರಡೂ ಪಂದ್ಯಗಳನ್ನೂ ಗೆದ್ದಿರುವ ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಕೋಲ್ಕತ್ತಾ ತಂಡದಿಂದ ಕಠಿಣ ಸವಾಲನ್ನು ಎದುರಿಸಲಿದೆ.

ಕೇನ್ ವಿಲಿಯಮ್ಸನ್ ನೇತೃತ್ವದ ಸನ್‍ರೈಸರ್ಸ್ ಅಡಿದ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 2ರಲ್ಲಿ ಸೋಲು ಕಂಡು 4 ಅಂಕಗಳೊಂದಿಗೆ  8ನೇ ಸ್ಥಾನದಲ್ಲಿದೆ.

ಶ್ರೇಯಸ್ ಅಯ್ಯರ್ ನೇತೃಥ್ವದ ಕೋಲ್ಕತ್ತಾ ತಂಡ 5 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2ರಲ್ಲಿ ಸೋತು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಸನ್‍ರೈಸರ್ಸ್ ತಂಡ ಸತತ ಎರಡು ಪಂದ್ಯಗಳನ್ನು ಗೆದ್ದಿರುವುದರಿಂದ ಕೋಲ್ಕತ್ತಾ ವಿರುದ್ಧ ಗೆದ್ದು ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ. ಕೇನ್ ವಿಲಿಯಮ್ಸನ್  ಕೂಡ ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ.  ಮಧ್ಯಮ ಕ್ರಮಾಂಕದಲ್ಲಿ  ನಿಕೊಲೊಸ್ ಪೂರಾನ್ ಹಾಗೂ ಏಡಿನ್ ಮಾರ್ಕ್‍ರಾಮ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಬೇಕಿದೆ.

ಕೆಳಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಗಾಯಗೊಂಡಿರುವುದು ಕೇನ್ ಪಡೆಗೆ ದೊಡ್ಡ ನಷ್ಟವಾಗಿದೆ. ಇವರ ಬದಲಿಗೆ ಕನ್ನಡಿಗ ಸುಚಿತ್ ಆಡುವ ಸಾಧ್ಯತೆ ಹೆಚ್ಚಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ  ಭುವನೇಶ್ವರ್ ಕುಮಾರ್, ನಟರಾಜನ್ ಹಾಗೂ ಉಮ್ರಾನ್ ಮಲ್ಲಿಕ್ ಮಿಂಚುತ್ತಿರುವುದು ತಂಡಕ್ಕೆವರದಾನವಾಗಿದೆ. ಸ್ಪಿನ್ ವಿಭಾಗದಲ್ಲಿ  ಶಶಾಂಕ್ ಸಿಂಗ್ ಹಾಗೂ ಸುಚೀತ್ ಸ್ಪಿನ್ ಮ್ಯಾಜಿಕ್ ಮಾಡಬೇಕಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡಿದೆ. ತಂಡದ ಬ್ಯಾಟಿಂಗ್‍ನಲ್ಲಿ ಆರಂಭಿಕ ಬ್ಯಾಟರ್‍ಗಳಾದ ಅಜಿಂಕ್ಯ ರಹಾನೆ ಹಾಗು ವೆಂಕಟೇಶ್ ಅಯ್ಯರ್ ಒಳ್ಳೆಯ ಆರಂಭ ನೀಡುತ್ತಿಲ್ಲ. ನಂತರ ಬರುವ  ಶ್ರೇಯಸ್ ಅಯ್ಯರ್ , ನಿತೀಶ್ ರಾಣಾ, ಆ್ಯಂಡ್ರೆ ರಸೆಲ್, ಸ್ಯಾಮ್ ಬಿಲ್ಲಿಂಗ್ಸ್ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ.  ಆಲ್ರೌಂಡರ್‍ಗಳಾದ ಪ್ಯಾಟ್ ಕಮಿನ್ಸ್‍, ಸುನಿಲ್ ನರೈನ್ ಬ್ಯಾಟಿಂಗ್‍ನಲ್ಲೂ ಮಿಂಚು ಹರಿಸಬೇಕು.

ಬೌಲಿಂಗ್ ವಿಭಾಗದ ಬಲಿಷ್ಠವಾಗಿದೆ. ಆದರೆ ಕಳೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ  ವಿಕೆಟ್ ಕೀಳಲು ಬೌಲರ್‍ಗೂ  ಪರದಾಡಿದರು.ಪ್ಯಾಟ್ ಕಮಿನ್ಸ್ , ವಂಕಟೇಶ್ ಅಯ್ಯರ್ ವಿಕೆಟ್  ಪಡೆಯದ ಇದ್ದಿದ್ದು  ದೊಡ್ಡ ಹಿನ್ನಡೆಯಾಯಿತು.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್

ಸನ್‍ರೈಸರ್ಸ್ ಹೈದ್ರಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡಿನ್ ಮಾರ್ಕ್‍ರಾಮ್, ನಿಕೊ

ಲೊಸ್ ಪೂರಾನ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಮಾರ್ಕೊ ಜೆನೆಸೆನ್, ಉಮ್ರಾನ್ ಮಲ್ಲಿಕ್, ಟಿ ನಟರಾಜನ್.

ಕೋಲ್ಕತ್ತಾಘಿ: ವೆಂಕಟೇಶ್ ಅಯ್ಯರ್, ಆ್ಯರಾನ್ ಫಿಂಚ್, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್‍ಘಿ, ನಿತೀಶ್ ರಾಣಾ, ಆ್ಯಂಡ್ರೆ ರಸ್ಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ರಸೀಕ್ ಸಲಾಮ್,ಉಮೇಶ್ ಯಾದವ್, ವರುಣ್ ಚಕ್ರವರ್ತಿ.        ?

 

 

- Advertisement -

Latest Posts

Don't Miss