ಮುಂಬೈ:ವೇಗಿ ಜಸ್ಪ್ರೀತ್ ಬುಮ್ರಾ ಅವರ ಅತ್ಯದ್ಭುತ ಬೌಲಿಂಗ್ ಹೊರತಾಗಿಯೂ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ವಿರುದ್ಧ 52 ರನ್ ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ರೋಹಿತ್ ಪಡೆ ಟೂರ್ನಿಯಲ್ಲಿ 9ನೇ ಸೋಲು ಕಂಡಿದೆ.
ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತಾ ಪರ ವೆಂಕಟೇಶ್ ಅಯ್ಯರ್ (43)ಹಾಗೂ ಅಜಿಂಕ್ಯ ರಹಾನೆ (25) ಮೊದಲ ವಿಕೆಟ್ಗೆ 60 ರನ್ ಸೇರಿಸಿದರು.
ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ 6, ಆ್ಯಂಡ್ರೆ ರಸೆಲ್ 9, ರಿಂಕು ಸಿಂಗ್ ಅಜೆಯ 23 ರನ್ ಗಳಿಸಿದರು. ಶೆಲ್ಡನ್ ಜಾಕ್ಸನ್ 5 ರನ್ ಗಳಿಸಿದರು. ಕೋಲ್ಕತ್ಥಾ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 165 ರನ್ ಪೇರಿಸಿತು.
166 ರನ್ ಗುರಿ ಬೆನ್ನತ್ತಿದ ಮುಂಬೈ ತಂಡ ನಾಯಕ ರೋಹಿತ್ ಶರ್ಮಾ (2) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.
ಇಶನ್ ಕೀಶನ್ 51, ತಿಲಕ್ ವರ್ಮಾ 6, ರಮಣ ದೀಪ್ ಸಿಂಗ್ 12, ಟಿಮ್ ಡೇವಿಡ್ 13,ಕಿರಾನ್ ಪೊಲಾರ್ಡ್ 15, ಡೇನಿಯಲ್ ಸ್ಯಾಮ್ಸ್ 1, ಮುರುಗನ್ ಅಶ್ವಿನ್ 0, ಕುಮಾರ್ ಕಾರ್ತಿಕೇಯಾ 3, ಜಸ್ಪರೀತ್ ಬುಮ್ರಾ 0 ರನ್ ಗಳಿಸಿದರು.
ಮುಂಬೈ 17.3 ಓವರ್ಗಳಲ್ಲಿ 113 ರನ್ ಗೆ ಆಲೌಟ್ ಆಯಿತು. ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರೆ ಆ್ಯಂಡ್ರೆ ರಸೆಲ್ 2 ವಿಕೆಟ್ ಪಡೆದರು.


