ಮುಂಬೈ:ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಿಂದೆಂದೂ ನೀಡಿರದ ಕೆಟ್ಟ ಪ್ರದರ್ಶನವನ್ನು ನೀಡಿದೆ.
ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿರುವ ಮುಂಬೈ ಮೊದಲ ಗೆಲುವಿಲ್ಲದೇ ನಿರಾಸೆ ಅನುಭವಿಸಿದೆ. ಸತತ 8ನೇ ಸೋಲಿನೊಂದಿಗೆ ಐಪಿಎಲನಲ್ಲಿ ಮುಂಬೈ ಅನಗತ್ಯ ದಾಖಲೆಯನ್ನ ಬರೆದಿದೆ. ವಾಂಖಡೆ ಅಂಗಳ ಮುಂಬೈ ತಂಡದ ತವರು. ತವರಿನಂಗಳದಲ್ಲಿಯೇ ರೋಹಿತ್ ಪಡೆ ಕಳಪೆ ಪ್ರದರ್ಶನ ನೀಡಿದೆ.
ಮುಂಬೈ ತಂಡ 169 ರನ್ ಗುರಿ ತಲುಪಲಗಾದೇ 132 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು.
ಗೆಲುವು ಕಾಣದೇ ಪರಿತ್ತಪಿಸುತ್ತಿದ್ದ ಮುಂಬೈಗೆ ಮತ್ತೊಂದು ವಿಷಯ ಬೇಸರ ತರಿಸಿತು. ಲಕ್ನೊ ವಿರುದ್ಧದ ಪಂದ್ಯದಲ್ಲಿ ಕಿರಾನ್ ಪೊಲಾರ್ಡ್ ಔಟಾದಾಗ ವಿಕೆಟ್ ಪಡೆದ ಸಂತಸದಲ್ಲಿ ಆಲ್ರೌಂಡರ್
ಕೃಣಾಲ್ ಪಾಂಡ್ಯ ವಿಚಿತ್ರವಾಗಿ ನಡೆದುಕೊಂಡರು. ಪೊಲಾರ್ಡ್ ಕೋಪಗೊಂಡರು.
ಸಾಧಾರಣ ಟಾರ್ಗೆಟ್ ಇದ್ದರೂ ಗೆಲುವನ್ನು ಬೆನ್ನತ್ತಲಾಗುತ್ತಿಲ್ಲ ಅನ್ನೋ ಬೇಸರದಲ್ಲಿ ಮುಂಬೈ ಇತ್ತು. ಅಂತಿಮ ಓವರ್ ಕೃಣಾಲ್ ಪಾಂಡ್ಯ ಮಾಡಿದ್ರು, ಸ್ಟ್ರೈಕ್ ನಲ್ಲಿ ಪೊಲಾರ್ಡ್ ಇದ್ರು. ಮೊದಲ ಎಸೆತದಲ್ಲೆ ಪೊಲಾರ್ಡ್ ದೀಪಕ್ ಹೂಡಾಗೆ ಕ್ಯಾಚ್ ಕೊಟ್ಟರು. ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿರುವಾಗಲೆ ಓಡಿ ಬಂದ ಕೃಣಾಲ್ ಪಾಂಡ್ಯ ಜಿಗಿದು ಪೊಲಾರ್ಡ್ ತಲೆಗೆ ಮುತ್ತಿಟ್ಟರು. ಪೋಲಾರ್ಡ್ಗೆ ಸಿಟ್ಟು ಬಂತು. ಈ ಘಟನೆ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕೃಣಾಲ್ ವರ್ತನೆಯನ್ನು ಟೀಕಿಸಿದ್ದಾರೆ.
ಈ ಹಿಂದೆ ಮೈದಾನದಲ್ಲಿ ಎದುರಾಳಿಗಳು ಕೆಣಕಿದರೆ ಪೊಲಾರ್ಡ್ ಅಲ್ಲಿಯೇ ತಿರುಗೇಟು ಕೊಡುತ್ತಿದ್ದರು. ಆದರೆ ಕೃಣಾಲ್ ಎದುರು ಏನು ಉತ್ತರ ಕೊಡದೇ ಸಪ್ಪೆ ಮುಖ ಹಾಕಿಕೊಂಡು ಪೆವಿಲಿಯನ್ಗೆ ತೆರೆಳಿದರು.