ಮುಂಬೈ: ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ಇಂದು ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಸಮಸ್ಯೆ ಬಗೆಹರಿಸಿಕೊಂಡು ಮುಂಬೈ ಮೇಲೆ ಸವಾರಿ ಮಾಡಿ ಪ್ಲೇ ಆಫ್ ಪ್ರವೇಶಿಲು ಹೋರಾಟ ಮಾಡಲಿದೆ.
ಕಳೆದ ಪಂದ್ಯದಲ್ಲಿ ಗುಜರಾತ್ ಪಂಜಾಬ್ ವಿರುದ್ಧ 8 ವಿಕೆಟ್‍ಗಳ ಸೋಲು ಕಂಡಿತು. ಗುಜರಾತ್ ತಂಡ ಅಗ್ರ ಕ್ರಮಾಂಕದಲ್ಲಿ ಅಸ್ಥಿರತೆ ಕಾಣುತ್ತಿದೆ. ಈ ಹಿಂದಿನ ಪಂದ್ಯ ಸೋತ ಹೊರತಾಗಿಯೂ ಗುಜರಾತ್ ತಂಡ ಮೊದಲ ಸ್ಥಾನದಲಿಯೇ ಮುಂದುವರೆದಿದೆ. ಇಂದಿನ ಪಂದ್ಯದಲ್ಲಿ ಹಾರ್ದಿಕ ಪಡೆ ಗೆದ್ದಲ್ಲಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಲಿದೆ.
ಆರಂಭಿಕ ಬ್ಯಾಟರ್ ಶುಭಮನ್ ಗಿಲ್ ನಿರೀಕ್ಷಿತಾ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಮ್ಯಾಥ್ಯು ವೇಡ್ ಬದಲು ವೃದ್ದಿಮಾನ್ ಸಾಹಾ ಅವರನ್ನು ಕಣಕ್ಕಿಳಿಸಿ ಜಾಣ್ಮೆ ಮೆರೆದಿದೆ.
ಸಾಯಿ ಸುದರ್ಶನ್ ತಂಡಕ್ಕೆ ಆಪಾದ್ಬಾಧವರಾಗಿದ್ದಾರೆ.ಉಳಿದಂತೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುವ ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ ಮೊನ್ನೆ ಪಂಜಾಬ್ ವಿರುದ್ಧ ವಿಫಲರಾಗಿದ್ದರು.
ನಾಯಕ ಹಾರ್ದಿಕ್ ಪಾಂಡ್ಯ 309 ರನ್ ಗಳಿಸಿದ್ದು ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ ಹಾಗೂ ರಶೀದ್ ಖಾನ್ ಸಿಕ್ಸರ್‍ಗಳನ್ನು ಸಿಡಿಸಿ ವೈಫಲ್ಯಗಳಿಂದ ಹೊರ ಬರಬೇಕಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹ್ಮದ್ ಶಮಿ, ಲಾಕಿ ಫರ್ಗ್ಯೂಸನ್, ಅಲಜಾರಿ ಜೋಸೆಫ್ ಮತ್ತು ರಶೀದ್ ಖಾನ್ ಬಲಿಷ್ಠ ಎದುರಾಳಿ ತಂಡವನ್ನೂ ಕಟ್ಟಿಹಾಕುವ ತಾಕತ್ತು ಹೊಂದಿದ್ದಾರೆ.
ಗೆಲುವು ಮುಂದುವರೆಸಲು ಮುಂಬೈ ಪ್ಲ್ಯಾನ್
ಮುಂಬೈ ತಂಡ ಸತತ 8 ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಮೊನ್ನೆ ಒಂದು ಪಂದ್ಯವನ್ನು ಗೆದ್ದು ಸಮಾ`Áನಪಟ್ಟುಕೊಂಡಿದೆ. ಸೂರ್ಯ ಕುಮಾರ್ ತಂಡದ ಸ್ಟಾರ್ ಆಗಿದ್ದಾರೆ. ಆದರೆ ನಾಯಕ ರೋಹಿತ್ ಶರ್ಮಾ ಹಾಗೂ ಇಶನ್ ಕೀಶನ್ ಫಾರ್ಮ್ ಸಮಸ್ಯೆಯಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಆಲ್ರೌಂಡರ್ ಕಿರಾನ್ ಪೊಲಾರ್ಡ್ ಫಿನೀಶರ್ ಪಾತ್ರವನ್ನು ನಿಭಾಶಯಿಸುವಲ್ಲಿ ವಿಫಲರಾಗಿದ್ದಾರೆ.
ಜಸ್ಪ್ರೀತ್ ಬುಮ್ರಾ ದುಬಾರಿಯಾಗಿಲ್ಲ ಆದರೆ ವಿಕೆಟ್ ಪಡೆಯದೆ ಇದ್ದಿದ್ದು ತಂಡಕ್ಕೆ ಹೊಡೆತ ನೀಡಿದೆ. ವೇಗಿಗಳಾದ ಡೇನಿಯಲ್ ಸ್ಯಾಮ್ಸ್ , ರಿಲೆ ಮೆರ್ಡಿತ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲಘಿ. ಮುಂಬೈ ತಂಡ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಹೊರಟಿದೆ.
ಇಂದು ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ?
ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ ಸುಳಿವು ಕೊಟ್ಟಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ 30ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ಇಂಡಿಯನ್ಸ್ ಖರೀದಿ ಮಾಡಿತ್ತು.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಮುಂಬೈ ತಂಡ: ರೋಹಿತ್ ಶರ್ಮಾ (ನಾಯಕ), ಇಶನ್ ಕಿಶನ್, ಸೂರ್ಯ ಕುಮಾರ್, ತಿಲಕ್ ವರ್ಮಾ, ಕಿರಾನ್ ಪೋಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸ್ಯಾಮ್ಸ್‍ಘಿ, ಹೃತಿಕ್ ಶೂಕಿನ್, ಕುಮಾರ್ ಕಾರ್ತಿಕೇಯಾ, ಜಸ್ಪ್ರೀತ್ ಬುಮ್ರಾ, ರಿಲೆ ಮೆರ್ಡಿತ್.
ಗುಜರಾತ್ ತಂಡ: ವೃದ್ದಿಮಾನ್ ಸಾಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯಘಿ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಲಾಕಿ ಫಗ್ರ್ಯುಸನ್, ಅಲಜಾರಿ ಜೋಶೆï, ಮೊಹ್ಮದ್ ಶಮಿ.