ಮುಂಬೈ: ಐಪಿಎಲ್‍ನ 56ನೇ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಮುಂಬೈ ತಂಡವನ್ನು ಇಂದು ಎದುರಿಸಲಿದೆ.
ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಕೋಲ್ಕತ್ತಾ ಮುಳುಗುತ್ತಿರುವ ಹಡಗು. ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆ, ರಣತಂತ್ರದಲ್ಲಿ ಬದಲಾವಣೆ ಈ ಬಾರಿಯ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಲು ಕಾರಣವಾಗಿದೆ.
ಇನ್ನು ಮುಂಬೈ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. 10 ಪಂದ್ಯಗಳಿಂದ ಕೇವಲ 4 ಅಂಕ ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಉಳಿದಿರುವ ಪಂದ್ಯಗಳಲ್ಲಿ ಗೆದ್ದರೆ ರೋಹಿತ್ ಪಡೆ 12 ಅಂಕಗಳನ್ನು ಸಂಪಾದಿಸಬಹುದು.
ಶ್ರೇಯಸ್ ಅಯ್ಯರ್ ನೇತೃಥ್ವದ ಕೋಲ್ಕತ್ತಾ ತಂಡ ಲಕ್ನೋ ವಿರುದ್ಧ 75 ರನ್‍ಗಳಿಂದ ಹೀನಾಯವಾಗಿ ಸೋತಿದೆ. 11 ಪಂದ್ಯಗಳಿಂದ 8 ಅಂಕ ಸಂಪಾದಿಸಿದೆ. ಕೆಕೆಆರ್ ಹೆಚ್ಚಂದರೆ 14 ಅಂಕ ಪಡೆಯಬಹುದು ಆದರೆ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆಯೋದು ಅನುಮಾನದಿಂದ ಕೂಡಿದೆ.
ಇನ್ನು ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಈಶನ್ ಕಿಶನ್ ಗುಜರಾತ್ ವಿರುದ್ಧ ಭರ್ಜರಿಯಾಗಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ರೋಹಿತ್ ಶರ್ಮಾ, ಇಶನ್ ಕೀಶನ್ ಹಾಗೂ ಸೂರ್ಯ ಕುಮಾರ್ ಪವರ್‍ಪ್ಲೇಯಲ್ಲಿ ಸೋಟಕ ಬ್ಯಾಟಿಂಗ್ ಮಾಡಿದರೆ ಕೋಲ್ಕತ್ತಾ ತಂಡ ಪವರ್ ಪ್ಲೇನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಗಿದೆ.
ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ಮೊದಲ ಆರು ಓವರ್‍ನಲ್ಲಿ ವಿಕೆಟ್ ಕಳೆದುಕೊಳ್ಳಬಾರದು. ಮುಂಬೈ ತಂಡ ಸಾಂಘಿಕ ಹೋರಾಟದ ಮೂಲದ ಗೆಲುವನ್ನು ಕಾಣುತ್ತಿದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ಮುಂಬೈ ತಂಡ: ಇಶನ್ ಕಿಶನ್(ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯ ಕುಮಾರ್, ತಿಲಕ್ ವರ್ಮಾ, ಕಿರಾನ್ ಪೆÇಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸ್ಯಾಮ್ಸ್, ಮುರುಗನ್ ಅಶ್ವಿನ್, ಕುಮಾರ್ ಕಾರ್ತಿಕೇಯಾ, ಜಸ್ಪ್ರೀತ್ ಬುಮ್ರಾ, ರಿಲೆ ಮೆರ್ಡಿತ್.
ಕೋಲ್ಕತ್ತಾ ತಂಡ: ಬಾಬಾ ಇಂದ್ರಜೀತ್, ಆ್ಯರಾನ್ ಫಿಂಚ್, ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್, ಅಕೂಲ್ ರಾಯ್, ಆ್ಯಂಡ್ರೆ ರಸೆಲ್,ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ಶಿವಂ ಮಾವಿ.