ಲಕ್ನೊಗೆ ವಿರುದ್ಧ ಗೆಲ್ಲುತ್ತಾ ಮುಂಬೈ ಇಂಡಿಯನ್ಸ್ ?

ಮುಂಬೈ:ಐಪಿಎಲ್‍ನ 37ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.


ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಈ ಬಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಸತತ 7 ಪಮದ್ಯಗಳನ್ನು ಕೈಚೆಲ್ಲಿದೆ. ಈ ಸೋಲಿನೊಂದಿಗೆ ಮುಂಬೈ ಐಪಿಎಲ್‍ನಲ್ಲಿ ಕೆಟ್ಟ ದಾಖಲೆಗಳನ್ನು ಬರೆದಿದೆ.

ಈಗಾಗಲೇ ಮುಂಬೈ ಇಂಡಿಯನ್ಸ್ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ ಆಡಿದೆ. ಕಳೆದ ಪಂದ್ಯದಲ್ಲಿ ಲಕ್ನೊ ಎದುರು 18 ರನ್‍ಗಳ ಅಂತರದಿಂದ ಸೋತಿತ್ತು. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿದೆ.

ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶನ್ ಕಿಶನ್ ಫಾರ್ಮ್ ಹುಡುಕಾಟದಲ್ಲಿದ್ದಾರೆ. ಅನುಭವಿ ಆಲ್ರೌಂಡರ್ ಕಿರಾನ್ ಪೊಲಾರ್ಡ್ 25 ರನ್ ಮೇಲೆ ಅಧಿಕ ರನ್ ಗಳಿಸಿಲ್ಲ.

ಇನ್ನು ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ 7 ಪಂದ್ಯಗಳಿಂದ ಕೇವಲ 4 ವಿಕೆಟ್ ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಿಂದ ಹೊರ ಬಿದ್ದಿರುವುದರಿಂದ ನಾಯಕ ರೋಹಿತ್ ಶರ್ಮಾ ಬೆಂಚ್ ಪರೀಕ್ಷೆ ಮಾಡಬಹುದಾಗಿದೆ. ಆರಂಭಿಕರಾಗಿ ಸಂಜಯ್ ಯಾದವ್ ಅಥವಾ ಮಯಾಂಕ್ ಮರ್ಕೆಂಡೆಗೆ ಅವಕಾಶ ಸಿಗಬಹುದಾಗಿದೆ.

ಇನ್ನು ಸೂಪರ್ ಜೈಂಟ್ಸ್ 7 ಪಂದ್ಯಗಳಿಂದ 4ರಲ್ಲಿ ಗೆದ್ದಿದೆ. ಪ್ಲೇ ಆಫ್ ರೇಸ್‍ನಲ್ಲಿದೆ. ಮೊನ್ನೆ ಆರ್‍ಸಿಬಿ ವಿರುದ್ಧ ಸೋತಿದ್ದ ಲಕ್ನೊ ಮತ್ತೆ ಗೆಲುವಿನ ಓಟ ಮುಂದುವರೆಸಬೇಕಿದೆ.

ಬೌಲಿಂಗ್ ವಿಭಾಗ ಚೆನ್ನಾಗಿದೆ ಆದರೆ ಬ್ಯಾಟಿಂಗ್‍ನಲ್ಲಿ ಮಧ್ಯಮ ಕ್ರಮಾಂಕ ಚಿಂತೆಗೀಡು ಮಾಡಿದೆ. ಕನ್ನಡಿಗ ಮನೀಶ್ ಪಾಂಡೆ ನಂ.3ರಲ್ಲಿ ಸೂಕ್ತ ಬ್ಯಾಟರ್ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

About The Author