ಮುಂಬೈ: ಹರಪ್ರೀತ್ ಬ್ರಾರ್ ಮಾರಕ ದಾಳಿಯ ನೆರೆವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ಕೊನೆಯ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಗೆ ವಿದಾಯ ಹೇಳಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಮೊದಲು ಆಯ್ಕೆ ಮಾಡಿಕೊಂಡಿತು. ಸನರೈಸರ್ಸ್ ಪ್ರಿಯಂ ಗರ್ಗ್ 4, ಅಭಿಷೇಕ್ ಶರ್ಮಾ 43, ರಾಹುಲ್ ತ್ರಿಪಾಠಿ 20, ಏಡಿನ್ ಮಾರ್ಕ್ ರಾಮ್ 21, ನಿಕೊಲೊಸ್ ಪೂರಾನ್ 5, ವಾಷಿಂಗ್ಟನ್ ಸುಂದರ್ 25, ರೊಮೆರಿಯೊ ಶೆಪಾರ್ಡ್ ಅಜೆಯ26 ರನ್ ಗಳಿಸಿದರು.
ಸನ್ ರೈಸರ್ಸ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆ ಹಾಕಿತು. ಪಂಜಾಬ್ ಪರ ಹರಪ್ರೀತ್ ಬ್ರಾರ್ 3, ನಾಥನ್ ಎಲ್ಲಿಸ್ 3 ವಿಕೆಟ್ ಪಡೆದರು.
158 ರನ್ ಗುರಿ ಬೆನ್ನತ್ತಿದ ಪಂಜಾಬ್ ತಂಡದ ಪರ ಜಾನಿ ಭೈರ್ ಸ್ಟೊ 23, ಶಿಖರ್ ಧವನ್ 39, ಶಾರುಖ್ ಖಾನ್ 19, ಮಯಾಂಕ್ ಅಗರ್ ವಾಲ್ 1, ಲಿಯಾಮ್ ಲಿವಿಂಗ್ ಸ್ಟೋನ್ ಅಜೇಯ 49, ಜಿತೇಶ್ ಶರ್ಮಾ 19, ಪ್ರೇರೆಕ್ ಮಂಕಡ್ ಅಜೇಯ 4 ರನ್ ಗಳಿಸಿದರು.
ಪಂಜಾಬ್ 15.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 160 ರನ್ ಕಲೆ ಹಾಕಿತು. ಸ್ಪಿನ್ನರ್ ಹರಪ್ರೀತ್ ಬ್ರಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಗೆಲುವಿನೊಂದಿಗೆ ಪಂಜಾಬ್ ತಂಡ ಟೂರ್ನಿಗೆ ಗುಡ್ ಬೈ ಹೇಳಿದೆ.