ಮುಂಬೈ:ಐಪಿಎಲ್ ನ 48ನೇ ಪಂದ್ಯದಲ್ಲಿ ಪಂಜಾಬ್ ತಂಡ ಬಲಿಷ್ಠ ಗುಜರಾತ್ ತಂಡವನ್ನು ಎದುರಿಸಲಿದೆ.
ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮತ್ತೊಂದು ಹೈವೋಲ್ಟೇಜ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.
ಇತ್ತಿಚೆಗಷ್ಟೆ ನಡೆದ ಮುಖಾಮುಖಿಯಲ್ಲಿ ಕೊನೆಯ ಎರಡು ಎಸೆತಗಳನ್ನು ರಾಹುಲ್ ತೆವಾಟಿಯಾ ಸಿಕ್ಸರ್ಗೆ ಅಟ್ಟಿ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು.
ರಾಹುಲ್ ತೆವಾಟಿಯಾ ಆಡದಿದ್ದರೆ ಡೇವಿಡ್ ಮಿಲ್ಲರ್ ಆಡಲಿದ್ದಾರೆ. ಡೇವಿಡ್ ಮಿಲ್ಲರ್ ಆಡದಿದ್ದೂ ರಶೀದ್ ಖಾನ್ ಕೂಡ ಸ್ಪೋಟಕ ಬ್ಯಾಟಿಂಗ್ ಮಾಡುವ ತಾಕತ್ತು ಹೊಂದಿದ್ದಾರೆ. ಈ ಮೂವರು ಆಟಗಾರರ ಬ್ಯಾಟಿಂಗ್ ನಮಗೆ ಆತ್ಮ ವಿಶ್ವಾಸ ತುಂಬಿದೆ ಎಂದು ನಾಯಕ ಹಾರ್ದಿಕ್ ಪಾಂಡ್ಯ ಇತ್ತಿಚೆಗೆ ಹೇಳಿದ್ದರು. 8,9,10ನೇ ಬ್ಯಾಟರ್ ಗಳು ಮ್ಯಾಚ್ ವಿನ್ನರ್ಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗುಜರಾತ್ ತಂಡದ ಓಪಮನರ್ ಶುಭಮನ್ ಗಿಲ್ ಕಳೆದ 6 ಪಂದ್ಯಗಳಿಂದ ಕೇವಲ 80 ರನ್ ಗಳಿಸಿದ್ದಾರೆ. ಇನ್ನು ನಂ.3ರಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದು ತಂಡಕ್ಕೆ ಹೆಚ್ಚುವರಿ ಬೌಲರ್ ಅನ್ನ ಸೇರಿಸಿಕೊಳ್ಳಬೇಕಾಗಿದೆ.
9 ಪಂದ್ಯಗಳಲ್ಲಿ 8 ಪಂದ್ಯವನ್ನು ಗೆದ್ದಿರುವ ಗುಜರಾತ್ಈ ಪಂದ್ಯವನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಸಾಕಷ್ಟು ಪಂದ್ಯಗಳು ಬಾಕಿ ಇರುವುದರಿಂದ ಅಡುವ ಹನ್ನೊಂದರ ಬಳಗವನ್ನು ಬದಲಾವಣೆ ಮಾಡಬಹುದಾಗಿದೆ. ಗುಜರಾತ್ ಪಾಳೆಯದಲ್ಲಿ ಆಟಗಾರರ ಉತ್ಸಾಹದಿಂದ ಇದ್ದಾರೆ.
ಇನ್ನು ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. 9 ಪಂದ್ಯಗಳಿಂದ ಪಂಜಾಬ್ 4 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಸಮತೋಲನ ಕಾಯ್ದುಕೊಳ್ಳುವುದೇ ಪಂಜಾಬ್ಗೆ ದೊಡ್ಡ ಸವಾಲಾಗಿದೆ.
ಪಂಜಾಬ್ ತಂಡ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಿದರೆ ಪ್ಲೇ ಆಫ್ಗೆ ಗೆ ಹೋಗೋದ್ರಲ್ಲಿ ಅನುಮಾನವೇ ಇಲ್ಲ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಪಂಜಾಬ್ ತಂಡ: ಶಿಖರ್ ಧವನ್, ಮಯಾಂಕ್ ಅಗರ್ವಾಲ್ (ನಾಯಕ), ಭಾನುಕಾ ರಾಜಪಕ್ಸ, ಜಾನಿ ಭೈರ್ ಸ್ಟೋ, ಲಿಯಾಮ್ ಲಿವೀಂಗ್ ಸ್ಟೋನ್, ಜಿತೇಶ್ ಶರ್ಮಾ, ರಿಷಿ ಧವನ್, ಕಗಿಸೊ ರಬಾಡ, ರಾಹುಲ್ ಚಾಹರ್, ಆರ್ಷದೀಪ್ ಸಿಂಗ್, ಸಂದೀಪ್ ಶರ್ಮಾ.
ಗುಜರಾತ್ ತಂಡ: ಶುಭಮನ್ ಗಿಲ್, ವೃದ್ದಿಮಾನ್ ಸಾಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್,ರಾಹುಲ್ ತೆವಾಟಿಯಾ , ರಶೀದ್ ಖಾನ್,ಅಲಜಾರಿ ಜೋಸೆಫ್, ಲಾಕಿ ಫರ್ಗ್ಯೂಸನ್,ಮೊಹ್ಮದ್ ಶಮಿ, ಯಶ್ ದಯಾಳ್ / ಪ್ರದೀಪ್ ಸಂಗ್ವಾನ್.