Friday, October 18, 2024

Latest Posts

ಪಂಜಾಬ್ ಎದುರು ಮಂಡಿಯೂರಿದ ಚೆನ್ನೈ ಕಿಂಗ್ಸ್

- Advertisement -

ಮುಂಬೈ: ಲಿಯಾಮ್ ಸ್ಟೋನ್ ಅವರ ಆಲ್ರೌಂಡ್ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಚೆನ್ನೈ ಕಿಂಗ್ಸ್ ವಿರುದ್ಧ 54 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.

ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಮಯಾಂಕ್ ಅಗರ್‍ವಾಲ್ (4) ಹಾಗೂ ಶಿಖರ್ ಧವನ್ (33) ಉತ್ತಮ ಆರಂಭ ಕೊಡುವಲ್ಲಿ ಎಡವಿದರು. ಭಾನುಕಾ ರಾಜಪಕ್ಸ (9 ರನ್).

14 ರನ್‍ಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಮಧ್ಯಮ ಕ್ರಮಾಂಕದಲ್ಲಿ ಬಂದ ಲಿಯಾಮ್ ಲೀವಿಂಗ್ ಸ್ಟೋನ್ ಚೆನ್ನೈ ಬೌಲರ್ಸ್‍ಗಳನ್ನ ಚೆಂಡಾಡಿ 27 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

ಒಟ್ಟು 32 ಎಸೆತದಲ್ಲಿ 5 ಬೌಂಡರಿ 5 ಸಿಕ್ಸರ್ ಸಿಡಿಸಿ 60 ರನ್ ಕಲೆ ಹಾಕಿದರು. ಜಿತೇಶ್ ಶರ್ಮಾ 26, ಶಾರುಖ್ ಖಾನ್ 6, ರಬಾಡ ಅಜೇಯ 12 ರನ್ ಗಳಿಸಿದರು. ಪಂಜಾಬ್ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.

181 ರನ್‍ಗಳ ಬೃಹತ್ ಸವಾಲು ಎದುರಿಸಿದ ಚೆನ್ನೈ ತಂಡ ಪಂಜಾಬ್ ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು. ರಾಬಿನ್ ಉತ್ತಪ್ಪ 13, ಋತುರಾಜ್ ಗಾಯಕ್ವಾಡ್ 1, ಅಂಬಾಟಿ ರಾಯ್ಡು 13, ರವೀಂದ್ರ ಜಡೇಜಾ 0 ರನ್ ಗಳಿಸಿದರು. 36 ರನ್‍ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ಧೋನಿ ಹಾಗೂ ಶಿವಂ ದುಬೆ ದೊಡ್ಡ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ ದುಬೆ ಅರ್ಷದೀಪ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಧೋನಿ 23 ರನ್ ಗಳಿಸಿ ಚಾಹರ್‍ಗೆ ವಿಕೆಟ್ ಒಪ್ಪಿಸಿದರು.

ಚೆನ್ನೈ 18 ಓವರ್‍ನಲ್ಲಿ 126 ರನ್ ಗಳಿಗೆ ಆಲೌಟ್ ಆಯಿತು. ಸ್ಪಿನ್ನರ್ ರಾಹುಲ್ 3 ವಿಕೆಟ್ ಪಡೆದರೆ, ಲಿವೀಂಗ್ ಸ್ಟೋನ್ ಹಾಗೂ ವೈಭವ್ ಅರೋರಾ ತಲಾ 2 ವಿಕೆಟ್ ಪಡೆದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಲಿವೀಂಗ್ ಸ್ಟೋನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

- Advertisement -

Latest Posts

Don't Miss