ಮುಂಬೈ:ವೇಗಿ ಕಗಿಸೊ ರಬಾಡ ಅವರ ಮಾರಕ ದಾಳಿಯ ನೆರೆವಿನಿಂದ ಪಂಜಾಬ್ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಇಲ್ಲಿನ ಡಿ.ವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಫಿಲ್ಡಿಂಗ್ ಆಯ್ದುಕೊಂಡಿತು.
ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ವೃದ್ದಿಮಾನ್ ಸಾಹಾ 21, ಶಭಮನ್ ಗಿಲ್ 9, ಸಾಯಿ ಸುದರ್ಶನ್ ಅಜೇಯ 65, ಹಾರ್ದಿಕ್ ಪಾಂಡ್ಯ 1, ಡೇವಿಡ್ ಮಿಲ್ಲರ್ 11, ರಾಹುಲ್ ತೆವಾಟಿಯಾ 11, ಲಾಕಿ ಫರ್ಗ್ಯೂಸನ್ ಅಜೇಯ 5 ರನ್ ಗಳಿಸಿದರು.
ಗುಜರಾತ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 143 ರನ್ ಕಲೆ ಹಾಕಿತು. ರಬಾಡ 33 ರನ್ ನೀಡಿ 4 ವಿಕೆಟ್ ಪಡೆದರು.
144 ರನ್ ಗಳ ಸುಲಭ ಗುರಿ ಬೆನ್ನತ್ತಿದ ಪಂಜಾಬ್ ತಂಡ ಓಪನರ್ ಜಾನಿ ಭೈರ್ ಸ್ಟೊ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.
ಮೂರನೆ ಕ್ರಮಾಂಕದಲ್ಲಿ ಬಂದ ಭಾನುಕಾ ರಾಜಪಕ್ಸ 40, ಶಿಖರ್ ಧವನ್ 38 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ಲಿಯಾಮ್ ಲಿವಿಂಗ್ ಸ್ಟೊನ್ ಅಜೇಯ 30 ರನ್ ಗಳಿಸಿದರು. ಪಂಜಾಬ್ 16 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್ ಕಲೆ ಹಾಕಿತು.