Sunday, September 8, 2024

Latest Posts

ಈ ಸಲವೂ ಕಪ್ ನಮ್ದಲ್ಲ

- Advertisement -

ಅಹಮದಾಬಾದ್: ಆರ್ಸಿಬಿ ತಂಡದ ಕಪ್ ಗೆಲ್ಲುವ ಕನಸು ಈ ಬಾರಿಯೂ ಭಗ್ನಗೊಂಡಿದೆ. ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ವಿರುದ್ಧ 7 ವಿಕೆಟ್ ಗಳ ಅಂತರದಿಂದ ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ.

2008ರ ನಂತರ ಇದೇ ಮೊದಲ ಬಾರಿಗೆ ಫೈನಲ್ಗೇರಿದ ರಾಜಸ್ಥಾನ ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಅಂತಿಮ ಹೋರಾಟ ನಡೆಸಲಿದೆ.

ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ದುಕೊಂಡಿತು.

ವಿರಾಟ್ ಕೊಹ್ಲಿ 7, ಫಾಫ್ ಡುಪ್ಲೆಸಿಸ್ 25, ರಜತ್ ಪಾಟಿದಾರ್ 58, ಗ್ಲೆನ್ ಮ್ಯಾಕ್ಸ್ ವೆಲ್ 24, ಮಹಿಪಾಲ್ ಲೊಮೊರೊರ್ 8,ದಿನೇಶ್ ಕಾರ್ತಿಕ್ 6, ಶಬಾಜ್ ಅಹಮದ್ ಅಜೇಯ 12, ಹರ್ಷಲ್ ಪಟೇಲ್ 1 ರನ್ ಗಳಿಸಿದರು. ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ 157 ರನ್ ಗಳಿಸಿತು.

ರಾಜಸ್ಥಾನ ಪರ ಪ್ರಸಿದ್ಧ ಕೃಷ್ಣ ಮತ್ತು ಒಬೆಡ್ ಮೆಕ್ಕೊಯೆ ತಲಾ 3 ವಿಕೆಟ್ ಪಡೆದರು.

158 ರನ್ ಗುರಿ ಬೆನ್ನತ್ತಿದ ರಾಜಸ್ಥಾನ ಯಶಸ್ವಿ ಜೈಸ್ವಾಲ್ 21, ಜೋಸ್ ಬಟ್ಲರ್ (ಅಜೇಯ 100 ರನ್), ಸಂಜು ಸ್ಯಾಮ್ಸನ್ 23, ದೇವದತ್ ಪಡಿಕಲ್ 9, ಶಿಮ್ರಾನ್ ಹೇಟ್ಮಯರ್ ಅಜೇಯ 2 ರನ್ ಗಳಿಸಿದರು.

ರಾಜಸ್ಥಾನ ರಾಯಲ್ಸ್ 18,1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಆರ್ಸಿಬಿ ಜೋಶ್ ಹೆಜ್ಲವುಡ್ 2 ವಿಕೆಟ್ ಪಡೆದರು. ಶತಕ ಸಿಡಿಸಿದ ಜೋಶ್ ಬಟ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

- Advertisement -

Latest Posts

Don't Miss