Friday, October 18, 2024

Latest Posts

ಕ್ವಾಲಿಫೈಯರ್ 1ಕ್ಕೆ ರಾಜಸ್ಥಾನ ಪ್ರವೇಶ

- Advertisement -

ಮುಂಬೈ:ಆರ್.ಅಶ್ವಿನ್ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರೆವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರೋಚಕವಾಗಿ 5 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ ಪ್ಲೇ ಆಫ್ ಪ್ರವೇಶಿಸಿದೆ. ಜೊತೆಗೆ ಮೊದಲ ಪ್ಲೇ ಆಫ್ ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸಣಸಲಿದೆ.

ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಋತುರಾಜ್ ಗಾಯಕ್ವಾಡ್ (2) ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 3ನೇ ಕ್ರಮಾಂಕದಲ್ಲಿ ಬಂದ ಮೊಯಿನ್ ಅಲಿ, ಡೆವೊನ್ ಕಾನ್ವೆಗೆ ಜೊತೆಗೂಡಿ 83 ರನ್ ಗಳ ಜೊತೆಯಾಟ ನೀಡಿ ತಂಡದ ಕುಸಿತ ತಡೆದರು. ನಿಧಾನಗತಿಯಲ್ಲಿ ಆಡುತ್ತಿದ್ದ ಡೆವೊನ್ (16) ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು.

ನಂತರ ಬಂದ ಬ್ಯಾಟರ್ಗಳು ಒಂದಂಕಿ ರನ್ ಗಳಿಗೆ ಸೀಮಿತವಾದರು. ನಾರಾಯಣ ಜಗದೀಶನ್ 1, ಅಂಬಾಟಿ ರಾಯ್ಡು 3, ಧೋನಿ 26, ಮಿಚೆಲ್ ಸ್ಯಾಂಟ್ನರ್ 1, ಸಿಮರ್ ಜೀತ್ ಸಿಂಗ್ ಅಜೇಯ 3 ರನ್ ಗಳಿಸಿದರು.

ಮೊಯಿನ್ ಅಲಿ 57 ಎಸೆತದಲ್ಲಿ 13 ಬೌಂಡರಿ 3 ಸಿಕ್ಸರ್ ಸಹಿತ 93 ರನ್ ಸಿಡಿಸಿದರು.ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು.

151 ರನ್ ಗುರಿ ಬೆನ್ನತ್ತಿದ ರಾಜಸ್ಥಾನಕ್ಕೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಜೋಸ್ ಬಟ್ಲರ್ 2, ಸಂಜು ಸ್ಯಾಮ್ಸನ್ 15, ದೇವದತ್ ಪಡಿಕಲ್ 3, ಶಿಮ್ರಾನ್ ಹೆಟ್ಮಯರ್ 6 ರನ್ ಗಳಿಸಿದರು.

ಬೌಂಡರಿಗಳ ಸುರಿಮಳೆಗೈದ ಯಶಸ್ವಿ ಜೈಸ್ವಾಲ್ 59 ರನ್ ಗಳಿಸಿದರು. ಕೊನೆಯಲ್ಲಿ ಆರ್ .ಅಶ್ವಿನ್ ಅವರ ಜವಾಬ್ದಾರಿಯುತ 40 ರನ್ ತಂಡ ಇನ್ನು ಎರಡು ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿತು.

ರಿಯಾನ್ ಪರಾಗ್ ಅಜೇಯ 10 ರನ್ ಗಳಿಸಿದರು. ಸೋಲಂಕಿ 2 ವಿಕೆಟ್ ಪಡೆದರು. ರಾಜಸ್ಥಾನ  19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತು. ಆರ್.ಅಶ್ವಿನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

- Advertisement -

Latest Posts

Don't Miss