ಮುಂಬೈ: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಸ್ಪೋಟಕ ಬ್ಯಾಟಿಂಗ್ ನೆರೆವಿನಿಂದ ರಾಜಸ್ಥಾನ ರಾಯಲ್ಸ್ ಎದುರಾಳಿ ಪಂಜಾಬ್ ವಿರುದ್ಧ 6 ವಿಕೆಟ್‍ಗಳ ರೋಚಕ ಗೆಲುವು ದಾಖಲಿಸಿದೆ.
ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ರಾಜಸ್ಥಾನ ಚೇಸಿಂಗ್ ಮಾಡಿ ಗೆದ್ದುಕೊಂಡಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಪಂಜಾಬ್ ಪರ ಆರಂಭಿಕರಾಗಿ ಕಣಕ್ಕಿಳಿದ ಜಾನಿ ಬೈರ್ ಸ್ಟೊ (56) ಶಿಖರ್ ಧವನ್ (12) ಮೊದಲ ವಿಕೆಟ್‍ಗೆ 47 ರನ್ ಸೇರಿಸಿದರು. ಶಿಖರ್ ಧವನ್ ನೀಡಿದ ಕ್ಯಾಚ್ ಅನ್ನ ಜೋಸ್ ಬಟ್ಲರ್ ಆಕರ್ಷಕವಾಗಿ ಒಂದೆ ಕೈಯಲ್ಲಿ ಹಿಡಿದರು.
ಮೂರನೆ ಕ್ರಮಾಂಕದಲ್ಲಿ ಬಂದ ರಾಜಪಕ್ಸ ಒಳ್ಳೆಯ ಸಾಥ್ ಕೊಟ್ಟರು. ಆದರೆ ಈ ವೇಳೆ ದಾಳಿಗಿಳಿದ ಯಜ್ವಿಂದರ್ ಚಾಹಲ್ , ಭಾನುಕಾ ರಾಜಪಕ್ಸ (27)ಅವರನ್ನು ಬೌಲ್ಡ್ ಮಾಡಿದರು.
ನಂತರ 15 ರನ್ ಗಳಿಸಿದ್ದ ಮಯಾಂಕ್ ಅಗರ್‍ವಾಲ್(15) ಅವರನ್ನು ಪೆವಿಲಿಯನ್‍ಗೆ ಅಟ್ಟಿದರು. 34 ಎಸೆತದಲ್ಲಿ ಅರ್ಧ ಶತಕ ಸಿಡಿಸಿದ ಜಾನಿ ಭೈರ್ ಸ್ಟೋ ಚಹಲ್ ಎಸೆತದಲ್ಲಿ ಎಲ್‍ಬಿ ಬಲೆಗೆ ಬಿದ್ದರು.
ಜಿತೇಶ್ ಶರ್ಮಾ 18 ಎಸೆತ ಎದುರಿಸಿ 4ಬೌಂಡರಿ 2 ಸಿಕ್ಸರ್ ಸಿಡಿಸಿ ಅಜೆಯ 38 ರನ್ ಗಳಿಸಿದರು. ಲಿಯಾಮ್ ಲಿವಿಂಗ್ ಸ್ಟೋನ್ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಬೌಲ್ಡ್ ಆದರು. ರಿಷಿ ಧವನ್ ಅಜೇಯ 5 ರನ್ ಗಳಿಸಿದರು.
ಪಂಜಾಬ್ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಪೇರಿಸಿತು. ರಾಜಸ್ಥಾನ ಪರ ಚಹಲ್ 3 ವಿಕೆಟ್ ಪಡೆದು ಮಿಂಚಿದರು. ಆರ್.ಅಶ್ವಿನ್, ಕುಲದೀಪ್ ತಲಾ 1 ವಿಕೆಟ್ ಪಡೆದರು.
190 ರನ್ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‍ಗೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‍ಗೆ 46 ರನ್ ಸೇರಿಸಿದರು.
ಬಿರುಸಿನ ಬ್ಯಾಟಿಂಗ್ ಮಾಡಿ ಮುನ್ನಗುತ್ತಿದ್ದ ಜೋಸ್ ಬಟ್ಲರ್ (30) ರಬಾಡಗೆ ವಿಕೆಟ್ ಒಪ್ಪಿಸಿದರು. ಬೌಂಡರಿಗಳ ಸುರಿಮಳೆಗೈದ ಜೈಸ್ವಾಲ್ 33 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.
68 ರನ್ ಗಳಿಸಿದ್ದಾಗ ಆರ್ಷದೀಪ್‍ಗೆ ವಿಕೆಟ್ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್ 23, ದೇವದತ್ ಪಡಿಕಲ್ 31 ರನ್ ಗಳಿಸಿದರು. ಶಿಮ್ರಾನ್ ಹೇಟ್ಮಯರ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ ಅಜೇಯ 31 ರನ್ ಗಳಿಸಿದರು.
ರಾಜಸ್ಥಾನ ಇನ್ನು ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಜಸ್ಥಾನ 19.4 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಪಂಜಾಬ್ ಪರ ಆರ್ಷದೀಪ್ 2, ರಬಾಡ, ರಿಷಿ ಧವನ್ ತಲಾ 1 ವಿಕೆಟ್ ಪಡೆದರು.