ಮುಂಬೈ:ವೇಗಿ ಟ್ರೆಂಟ್ ಬೌಲ್ಟ್ ಅವರ ಸೊಗಸಾದ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ರಾಜಸ್ಥಾನ ರಾಯಲ್ಸ್ ತಂಡ ಲಕ್ನೊ ವಿರುದ್ಧ 24 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಆಯ್ದುಕೊಂಡಿತು. ಓಪನರ್ ಜೋಸ್ ಬಟ್ಲರ್ (2) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಯಶಸ್ವಿ ಜೈಸ್ವಾಲ್ 42, ನಾಯಕ ಸಂಜು ಸ್ಯಾಮ್ಸನ್ 32, ದೇವದತ್ ಪಡಿಕಲ್ 39, ರಿಯಾನ್ ಪರಾಗ್ 19, ಜೇಮ್ಸ್ ನಿಶಾಮ್ 14, ಆರ್.ಅಶ್ವಿನ್ ಅಜೇಯ 10, ಟ್ರೆಂಟ್ ಬೌಲ್ಟ್ ಅಜೇಯ 17 ರನ್ ಗಳಿಸಿದರು. ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು.
179 ರನ್ ಗುರಿ ಬೆನ್ನತ್ತಿದ ಲಕ್ನೊ ತಂಡಕ್ಕೆ ವೇಗಿ ಟ್ರಂಟ್ ಬೌಲ್ಟ್ ಆಘಾತ ನೀಡಿದರು. ಕ್ವಿಂಟಾನ್ ಡಿಕಾಕ್ (7ರನ್) ಹಾಗೂ ನಾಯಕ ಕೆ.ಎಲ್. ರಾಹುಲ್ (10 ರನ್) ಅವರನ್ನು ಪೆವಿಲಿಯನ್ ಅಟ್ಟಿದರು.
ಆಯೂಷ್ ಬಡೋನಿ (0), ದೀಪಕ್ ಹೂಡಾ 59, ಕೃಣಾಲ್ ಪಾಂಡ್ಯ 25, ಮಾರ್ಕಸ್ ಸ್ಟೋಯ್ನಿಸ್ 27, ಜಾಸನ್ ಹೋಲ್ಡರ್ 1, ಮೊಹ್ಸಿನ್ ಖಾನ್ 9 ರನ್ ಗಳಿಸಿದರು.
ಲಕ್ನೊ ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಪೇರಿಸುವಲ್ಲಿ ಮಾತ್ರ ಶಕ್ತವಾಯಿತು. ರಾಜಸ್ಥಾನ ಪರ ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ ತಲಾ 2 ವಿಕೆಟ್ ಪಡೆದರು., ಚಹಲ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು.