ಕೋಲ್ಕತ್ತಾ : 15ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಕ್ವಾಲಿಫೈಯರ್ 2ಕ್ಕೆ ಪ್ರವೇಶ ಮಾಡಿದೆ. ಬುಧವಾರ ಲಕ್ನೊ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 14 ರನ್ ಗಳ ಗೆಲುವು ದಾಖಲಿಸಿದೆ.
ಟಾಸ್ ಗೆದ್ದ ಲಕ್ನೊ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (0) ಅವರನ್ನು ಕಳೆದುಕೊಂಡಿತು. ವಿರಾಟ್ ಕೊಹ್ಲಿ ಜೊತೆಗೂಡಿದ ರಜತ್ ಪಟಿದಾರ್ ತಂಡದ ಕುಸಿತ ತಡೆದರು.
ವಿರಾಟ್ ಕೊಹ್ಲಿ 25 ರನ್ ಗಳಿಸಿ ಆವೇಶ್ ಖಾನ್ ಗೆ ವಿಕೆಟ್ ಒಪ್ಪಿಸಿದರು. ಬಿರುಸಿನ ಬ್ಯಾಟಿಂಗ್ ಮಾಡಿದ ರಜತ್ ಪಟಿದಾರ್ 28 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.
ಗ್ಲೆನ್ ಮ್ಯಾಕ್ಸ್ ವೆಲ್ 9 ರನ್, ಮಹಿಪಾಲ್ ಲೊಮೊರೊರ್ 14 ರನ್ ಗಳಿಸಿದರು. ಆವೇಶ್ ಖಾನ್ ಅವರ 16ನೇ ಓವರ್ ನಲ್ಲಿ ರಜತ್ ಪಟಿದಾರ್ 26 ರನ್ ಚಚ್ಚಿರಿದರು.ನಂತರ ಒತ್ತಡಕ್ಕೆ ಸಿಲುಕಿದ ಲಕ್ನೊ ಸಾಕಷ್ಟು ರನ್ ಬಿಟ್ಟುಕೊಟ್ಟಿತ್ತು.
ದಿನೇಶ್ ಕಾರ್ತಿಕ್ ಅವರೊಂದಿಗಿನ ಜೊತೆಯಾಟದಲ್ಲಿ 41 ಎಸೆತದಲ್ಲಿ 92 ರನ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು.
ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆ ಹಾಕಿತು.
208 ರನ್ ಗುರಿ ಬೆನ್ನತ್ತಿದ ಲಕ್ನೊ ಜೈಂಟ್ಸ್ ತಂಡ ಆರಂಭದಲ್ಲೆ ಕ್ವಿಂಟಾನ್ ಡಿಕಾಕ್ (6),ಕೆಎಲ್.ರಾಹುಲ್ 76, ಮನನ್ ವೋಹ್ರಾ 19, ದೀಪಕ್ ಹೂಡಾ 45, ಮಾರ್ಕಸ್ ಸ್ಟೋಯ್ನಿಸ್ 9, ಎವಿನ್ ಲಿವಿಸ್ 2, ದುಶ್ಮಾಂತ್ ಚಾಮೀರಾ ಅಜೇಯ 11 ರನ್ ಗಳಿಸಿದರು.
ಜೋಶ್ ಹೆಜ್ಲ ವುಡ್ 3 ವಿಕೆಟ್, ಮೊಹ್ಮದ್ ಸಿರಾಜ್, ವನಿಂದು ಹಸರಂಗ, ಮತ್ತು ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ಶತಕ ಸಿಡಿಸಿದ ರಜತ್ ಪಟಿಧಾರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

