Saturday, April 19, 2025

Latest Posts

ಕಾರ್ತಿಕ್, ಮ್ಯಾಕ್ಸ್‍ವೆಲ್ ಅಬ್ಬರಕ್ಕೆ ಶಾಕ್ ಆದ ಡೆಲ್ಲಿ

- Advertisement -

ಮುಂಬೈ:ದಿನೇಶ್ ಕಾರ್ತಿಕ್ ಅವರ ಅತ್ಯದ್ಬುತ ಬ್ಯಾಟಿಂಗ್ ನೆರೆವಿನಿಂದ ಆರ್‍ಸಿಬಿ ಬಲಿಷ್ಠ ಡೆಲ್ಲಿ ವಿರುದ್ಧ 16 ರನ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಆರ್‍ಸಿಬಿ ಅಂಕಪಟ್ಟಿಯಲ್ಲಿ ಟಾಪ್ ನಾಲ್ಕಕ್ಕೇರಿದೆ.


ವಾಂಖೆಡೆ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಕದನದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಆರ್‍ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಫಾಫ್ ಡುಪ್ಲೆಸಿಸ್ (8 ರನ್) ಹಾಗೂ ಅನೂಜ್ ರಾವತ್ (0) ಉತ್ತಮ ಅರಂಭ ಕೊಡುವಲ್ಲಿ ಎಡವಿದರು. ನಂತರ ಬಂದ ವಿರಾಟ್ ಕೊಹ್ಲಿ 12 ರನ್ ಗಳಿಸಿ ರನೌಟ್ ಆದರು.

ತಂಡದ ಜವಾಬ್ದಾರಿ ಹೊತ್ತ ಮ್ಯಾಕ್ಸ್‍ವೆಲ್ ಸುಯೇಷ್ ಪ್ರಭುದೇಸಾಯಿ ಜೊತೆಗೂಡಿ ತಂಡದ ಕುಸಿತ ತಡೆದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಮ್ಯಾಕ್ಸ್‍ವೆಲ್ 30 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

55 ರನ್ ಗಳಿಸಿದ್ದ ಮ್ಯಾಕ್ಸ್‍ವೆಲ್ ಕುಲ್‍ದೀಪ್‍ಗೆ ಬಲಿಯಾದರು. 92 ರನ್‍ಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಆರ್‍ಸಿಬಿ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜೊತೆಗೂಡಿದ ಶಹಬಾಜ್ ಅಹಮದ್ 32, ದಿನೇಶ್ ಕಾರ್ತಿಕ್ ತಂಡದ ಸ್ಕೋರ್ ಹೆಚ್ಚಿಸಿದರು. ಬೌಂಡರಿ ಸಿಕ್ಸರ್‍ಗಳ ಸುರಿಮಳೆಗೈದ ದಿನೇಶ್ ಕಾರ್ತಿಕ್ ಕೇವಲ 26 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

ಕಾರ್ತಿಕ್ ಒಟ್ಟು 34 ಎಸೆತದಲ್ಲಿ 5 ಬೌಂಡಿ 5 ಸಿಕ್ಸರ್ ನೆರೆವಿನಿಂದ ಅಜೇಯ 66 ರನ್ ಗಳಿಸಿದರು. ಆರ್‍ಸಿಬಿ ನಿಗಿದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ.
190 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಆರಂಭಿಕರಾದ ಪೃಥ್ವಿ ಶಾ (16) ಹಾಗೂ ಡೇವಿಡ್ ವಾರ್ನರ್ (66) ಮೊದಲ ವಿಕೆಟ್‍ಗೆ 50 ರನ್ ಸೇರಿಸಿದರು.

ಮಿಚೆಲ್ ಮಾರ್ಷ್ 14, ಬಿರುಸಿನ ಬ್ಯಾಟಿಂಗ್ ಮಾಡಿದ ವಾರ್ನರ್ 29 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. ನಾಯಕ ರಿಷಭ್ ಪಂತ್ 34 ರನ್, ರೊವಮನ್ ಪೊವೆಲ್ 0, ಲಲಿತ್ ಯಾದವ್ 1,ಶಾರ್ದೂಲ್ ಠಾಕೂರ್ 17, ಅಕ್ಷರ್ ಪಟೇಲ್ ಅಜೇಯ 10, ಕುಲದೀಪ್ ಯಾದವ್ ಅಜೇಯ 10 ರನ್ ಗಳಿಸಿದರು.

ಡೆಲ್ಲಿ ತಂಡ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 173 ರನ್ ಗಳಿಸುವಷ್ಟೆ ಶಕ್ತವಾಯಿತು. ಆರ್‍ಸಿಬಿ ಪರ ಜೋಶ್ ಹೆಜ್ಲ್ ವುಡ್ 3, ಮೊಹ್ಮದ್ ಸಿರಾಜ್ 2, ವನಿಂದು ಹಸರಂಗ 1 ವಿಕೆಟ್ ಪಡೆದರು.

- Advertisement -

Latest Posts

Don't Miss