Sunday, April 20, 2025

Latest Posts

ಆರ್ಸಿಬಿಗೆ ಹ್ಯಾಟ್ರಿಕ್ ಸೋಲು : ಪ್ಲೇ ಆಫ್ ಹಾದಿ ಕಠಿಣ

- Advertisement -

ಮುಂಬೈ:ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ಗೆ ತತ್ತರಿಸಿದ ಆರ್ ಸಿಬಿ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ದ 6 ವಿಕೆಟ್ ಗಳ ಸೋಲು ಅನುಭವಿಸಿದೆ.

ಬ್ರಾಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಆರ್ಸಬಿ ತಂಡಕ್ಕೆ ಒಳ್ಳೆಯ ಆರಂಭ ಕೊಡುವಲ್ಲಿ ನಾಯಕ ಡುಪ್ಲೆಸಿಸ್ (0) ಎಡವಿದರು.

ವಿರಾಟ್ ಕೊಹ್ಲಿ  (58 ರನ್), ರಜತ್ ಪಟಿದಾರ್ 52, ಗ್ಲೆನ್ ಮ್ಯಾಕ್ಸವೆಲ್ 33, ದಿನೇಶ್ ಕಾರ್ತಿಕ್ 2, ಶಬಾಜ್ ಅಹ್ಮದ್ 2, ಮಹಿಪಾಲ್ ಲೊಮೊರೊರ್ 16 ರನ್ ಗಳಿಸಿದರು.

ಆರ್ಸಿಬಿ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿದರು. ಗುಜರಾತ್ ಪರ ಪ್ರದೀಪ್ ಸಾಂಗ್ವಾನ್ 2 ವಿಕೆಟ್ ಪಡೆದರು.

171 ರನ್ ಗುರಿ ಬೆನತ್ತಿದ ಗುಜರಾತ್ಗೆ ಆರಂಭಿಕರಾದ ವೃದ್ದಿಮಾನ್ ಸಾಹಾ (29) ಶುಭಮನ್ ಗಿಲ್ (31) ಮೊದಲ ವಿಕೆಟ್ಗೆ 51 ನ್ ಸೇರಿಸಿದರು.

ಸಾಯಿ ಸುದರ್ಶನ್ 20, ಹಾರ್ದಿಕ್ ಪಾಂಡ್ಯ 3 ರನ್ ಗಳಿಸಿದರು. 95 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಯಾದ ಡೇವಿಡ್ ಮಿಲ್ಲರ್ 39 ಹಾಗೂ ರಾಹುಲ್ ತೆವಾಟಿಯಾ 43ಸ್ಪೋಟಕ ಬ್ಯಾಟಿಂಗ್ ಮಾಡಿ ತಂಡವನ್ನು ಇನ್ನು ಮೂರು ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

- Advertisement -

Latest Posts

Don't Miss