Tuesday, April 15, 2025

Latest Posts

ಇಂದು ಲಕ್ನೊ ಬ್ಯಾಟಿಂಗ್ vs ಆರ್‍ಸಿಬಿ ಬೌಲಿಂಗ್  ಫೈಟ್

- Advertisement -

ಮುಂಬೈ: ಐಪಿಎಲ್‍ನ 31ನೇ ಪಂದ್ಯದಲ್ಲಿ ಆರ್‍ಸಿಬಿ ತಂಡ ಬಲಿಷ್ಠ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲಕಾರಿಯಾಗಿದೆ. ಉಭಯ ತಂಡಗಳು ಈ ಹಿಂದಿನ ಪಂದ್ಯಗಳನ್ನು  ಗೆದ್ದಿವೆ. ಕೆ.ಎಲ್.ರಾಹುಲ್ ನೇತೃತ್ವದ ಲಕ್ನೊ ತಂಡ ಮೊನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ  ಗೆಲುವು ದಾಖಲಿಸಿದಲ್ಲದೇ ಈ ಹಿಂದಿನ ಪಂದ್ಯಗಳಲ್ಲೂ ಒಳ್ಳೆಯ ಪ್ರದರ್ಶನ ನೀಡಿತ್ತು.

ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್‍ಸಿಬಿ ತಂಡ 6 ಪಂದ್ಯಗಳಿಂದ 4ರಲ್ಲಿ ಗೆದ್ದು 2ರಲ್ಲಿ ಸೋತು 8 ಅಂಕ ಪಡೆದಿದೆ. ಇನ್ನು ಲಕ್ನೊ ತಂಡ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 2ರಲ್ಲಿ ಸೋತು 8 ಅಂಕ  ಪಡೆದಿದೆ. ಎರಡೂ ತಂಡಗಳಿಗೂ ಗೆಲುವು ಮುಖ್ಯವಾಗಿದ್ದು  ಗೆದ್ದ ತಂಡ ಅಗ್ರಸ್ಥಾನಕ್ಕೇರಲಿದೆ.

ಆರ್‍ಸಿಬಿ ತಂಡದ ಬ್ಯಾಟಿಂಗ್ ಕ್ರಮಾಂಕ ದುರ್ಬಲವಾಗಿದೆ. ಆರಂಭಿಕ ಪಂದ್ಯದ ನಂತರ ಫಾಫ್ ಡುಪ್ಲೆಸಿಸ್ ದೊಡ್ಡ ಇನ್ನಿಂಗ್ಸ್ ಕೊಟ್ಟಿಲ್ಲ.  ಅನೂಜ್ ರಾವತ್ ನಿರೀಕ್ಷಿತಾ ಪ್ರದರ್ಶನ ಬಂದಿಲ್ಲ.

ಇನ್ನು ರನ್ ಮಷೀನ್ ವಿರಾಟ್ ಕೊಹ್ಲಿ  ಒಳ್ಳೆಯ ಫಾರ್ಮ್‍ನಲ್ಲಿರುವಂತೆ ಕಂಡು ಬಂದರೂ ಈ ಆವೃತ್ತಿ ಅವರ ಪಾಲಿಗೆ ಹತಾಶೆಯಿಂದ ಕೂಡಿದೆ.

ಹೊಡಿ ಬಡಿ ಆಟಗಾರ ಗ್ಲೆನ್ ಮ್ಯಾಕ್ಸವೆಲ್ ಆಗಮನ ಆರ್‍ಸಿಬಿ ಆನೆ ಬಲ ತುಂಬಿದೆ.  ಕಳೆದ ಪಂದ್ಯದಲ್ಲಿ ಮ್ಯಾಕ್ಸ್‍ವೆಲ್ 34 ಎಸೆತದಲ್ಲಿ 55 ರನ್ ಗಳಿಸಿದ್ದರು.

ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶರ್ ಪಾತ್ರವನ್ನು ಒಬ್ಬರೆ ನಿಭಾಯಿಸುತ್ತಿದ್ದು ತಂಡದ ಬ್ರಹ್ಮಾಸವಾಗಿದ್ದಾರೆ.

ಇವರೊಂದಿಗೆ ಶಬಾಜ್ ಅಹ್ಮದ್ ಕೂಡ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿರುವುದು ಗೆಲುವು ಸುಲಭವಾಗಿದೆ.

ಬೌಲಿಂಗ್ ವಿಭಾಗದಲ್ಲಿ  ಜೋಶ್ ಹೆಜ್ಲ್‍ವುಡ್ ಮನ್ನೆ ಡೆಲ್ಲಿ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು.  ಇವರೊಂದಿಗೆ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಲಕ್ನೊ ಬ್ಯಾಟರ್‍ಗಳನ್ನು ಸ್ಪಿನ್ ಮ್ಯಾಜಿಕ್ ಮೂಲಕ  ಕಟ್ಟಿಹಾಬೇಕಿದೆ.ಡೆತ್ ಓವರ್‍ನಲ್ಲಿ  ಹರ್ಷಲ್ ಪಟೇಲ್ ಲಕ್ನೊ ಬ್ಯಾಟರ್‍ಗಳಿಗೆ ಕಡಿವಾಣ ಹಾಕಬೇಕಿದೆ.

ಇನ್ನು ಲಕ್ನೊ ಸೂಪರ್ ಜೈಂಟ್ಸ್ ತಂಡದಲ್ಲಿ ನಾಯಕ ಕೆ.ಎಲ್.ರಾಹುಲ್ ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಶತಕ ಸಿಡಿಸಿದ್ದರು. ರಾಹುಲ್ ಟೂರ್ನಿಯಲ್ಲಿ ಒಟ್ಟು 235 ರನ್ ಹೊಡೆದಿದ್ದಾರೆ.

ಸಹ ಆರಂಭಿಕ ಆಟಗಾರ ಕ್ವಿಂಟಾನ್ ಡಿಕಾಕ್ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆಯೂಶ್ ಬಡೊನಿ, ದೀಪಕ್ ಹೂಡಾ ಮತ್ತು ಕೃಣಾಲ್ ಪಾಂಡ್ಯ ಮೊತ್ತ ಹೆಚ್ಚಿಸುವ ಬ್ಯಾಟರ್‍ಗಳಾಗಿದ್ದಾರೆ.

ಆಲ್ರೌಂಡರ್‍ಗಳಾದ ಜಾಸನ್ ಹೋಲ್ಡರ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಿಂಚು ಹರಿಸಿದ್ದಾರೆ.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 

ಆರ್‍ಸಿಬಿ ತಂಡ:  ಫಾಫ್ ಡುಪ್ಲೆಸಿಸ್ (ನಾಯಕ), ಅನೂಜ್ ರಾವತ್, ವಿರಾಟ್ ಕೊಹ್ಲಿಘಿ, ಗ್ಲೆನ್ ಮ್ಯಾಕ್ಸ್‍ವೆಲ್, ಸುಯಶ್ ಪ್ರಭುದೇಸಾಯಿ, ಶಬಾಜ್ ಅಹ್ಮದ್,  ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮೊಹ್ಮದ್ ಸಿರಾಜ್, ಹರ್ಷಲ್ ಪಟೇಲ್, ಜೋಶ್ ಹೆಜ್ಲವುಡ್. 

ಲಕ್ನೊ ತಂಡ: ಕೆ.ಎಲ್.ರಾಹುಲ್ (ನಾಯಕ), ಕ್ವಿಂಟಾನ್ ಡಿಕಾಕ್, ಮನೀಶ್ ಪಾಂಡೆ,  ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ ,  ಆಯೂಶ್ ಬದೋನಿ, ಜಾಸನ್ ಹೋಲ್ಡರ್,ದುಶ್ಮಂತ್ ಚಾಮೀರಾ, ಆವೇಶ್ ಖಾನ್, ರವಿ ಬಿಷ್ಣೋಯಿ.           

 

- Advertisement -

Latest Posts

Don't Miss