Wednesday, July 2, 2025

Latest Posts

ಆರ್ಸಿಬಿ ಪ್ಲೇಯಿಂಗ್ ಇಲೆವೆನ್‍ನಲ್ಲಿ ಬದಲಾವಣೆ

- Advertisement -

ಮುಂಬೈ:15ನೇ ಆವೃತ್ತಿಯ ಐಪಿಎಲ್‍ನಲ್ಲಿ ಆರ್‍ಸಿಬಿ ಹಾಗೂ ಲಕ್ನೊ ಸೂಪರ್ ಜೈಂಟ್ಸ್ ನಡುವೆ ಮಹಾ ಕದನ ನಡೆಯಲಿದೆ.
ಡಿ.ವೈ,ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.


ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್‍ಸಿಬಿ ಹಾಗೂ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೊ ತಂಡ ತಲಾ 6 ಪಂದ್ಯಗಳ್ನನಾಡಿದ್ದು 4ರಲ್ಲಿ ಗೆಲುವು ಕಂಡು 2ರಲ್ಲಿ ಸೋಲು ಕಂಡಿದೆ. ಇಂದು ಗೆದ್ದವರು ಅಗ್ರಸ್ಥಾನಕ್ಕೇರಲಿದ್ದಾರೆ.

ಆರ್‍ಸಿಬಿಗೆ ಈ ಪಂದ್ಯ ಮಹತ್ವದ್ದಾಗಿದೆ. ಈ ಕಾರಣಕ್ಕಾಗಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ಬ್ಯಾಟಿಂಗ್‍ನಲ್ಲಿ ತಂಡಕ್ಕೆ ಒಳ್ಳೆಯ ಆರಂಭ ಸಿಗುತ್ತಿಲ್ಲ. ಅನೂಜ್ ರಾವತ್ ಅವರನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ.

ಇತ್ತ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಒಳ್ಳೆಯ ಬ್ಯಾಟಿಂಗ್ ಮಾಡುತ್ತಿಲ್ಲ. ಫಾಫ್ ಡುಪ್ಲೆಸಿಸ್ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

ಇಲ್ಲವಾದರೆ ತಂಡ ಸೇರಿಕೊಂಡಿರುವ ರಜತ್ ಪಟಿದಾರ ಅಥವಾ ಮಹಿಪಾಲ್ ಲುಮ್ರಾಗೆ ಅವಕಾಶ ನೀಡಿದರೆ ಅಚ್ಚರಿ ಇಲ್ಲ. ಇನ್ನು ಮಧ್ಯಕ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.

ಒಟ್ಟಾರೆ ಆರ್‍ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ ಹೇಗಿದೆ ಅನ್ನೋ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ.

- Advertisement -

Latest Posts

Don't Miss