Sunday, December 22, 2024

Latest Posts

ರಾಜಸ್ಥಾನ ಗೆಲುವಿನ ಓಟಕ್ಕೆ ಬೀಳುತ್ತಾ ಬ್ರೇಕ್ ?

- Advertisement -

ಮುಂಬೈ: ಐಪಿಎಲ್‍ನ 13ನೇ ಪಂದ್ಯದಲ್ಲಿಂದು ಆರ್‍ಸಿಬಿ ತಂಡ ಬಲಿಷ್ಠ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಈ ಹಿಂದಿನ ಎರಡು ಪಂದ್ಯಗಳನ್ನು ಗೆದ್ದಿರುವ ಎರಡೂ ತಂಡಗಳು ಗೆಲುವಿನ ಓಟ ಮುಂದುವರೆಸಲು ನಿರ್ಧರಿಸಿವೆ.


ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಕದನ ಕುತೂಹಲ ಕೆರೆಳಿಸಿದೆ.ಫಾಫ್ ಡುಪ್ಲೆಸಿಸ್ ನೇತೃತ್ವದ ಅರ್‍ಸಿಬಿ ಎರಡು ಪಂದ್ಯಗಳ ಪೈಕಿ ಒಂದನ್ನು ಸೋತು ಮತ್ತೊಂದು ಪಂದ್ಯವನ್ನು ಗೆದ್ದಿದೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡ ಆಡಿದ ಎರಡು ಪಂದ್ಯವನ್ನು ಗೆದ್ದು ಬೀಗಿದೆ.
ಆರ್‍ಸಿಬಿ ತಂಡದಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಒಳ್ಳೆಯ ಫಾರ್ಮ್‍ನಲ್ಲಿದ್ದಾರೆ. ಅನೂಜ್ ರಾವತ್ ಒಳ್ಳೆಯ ಸಾಥ್ ಕೊಡಬೇಕಿದೆ. ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಜವಾಬ್ದಾರಿಯುತವಾಗಿ ಆಡಬೇಕಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ಹಸರಂಗ ಮತ್ತೆ ಸ್ಪಿನ್ ಮ್ಯಾಜಿಕ್ ಇದೆ. ಡೇವಿಡ್ ವಿಲ್ಲಿ, ಮೊಹ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ರಾಜಸ್ಥಾನ ಬ್ಯಾಟರ್‍ಗನ್ನು ಕಟ್ಟಿಹಾಕಬೇಕಿದೆ.ಡೆತ್ ಓವರ್‍ನಲ್ಲಿ ವೇಗಿ ಹರ್ಷಲ್ ಪಟೇಲ್ ಕಮಾಲ್ ಮಾಡಬೇಕಿದೆ.

ಇನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬ್ಯಾಟರ್‍ಗಳು ಬ್ರಹ್ಮಾಸ್ತ್ರವಾಗಿದ್ದಾರೆ. ಓಪನರ್ ಜೋಸ್ ಬಟ್ಲರ್ ಒಳ್ಳೆಯ ಫಾರ್ಮ್‍ನಲ್ಲಿದ್ದು ಮತ್ತೊಂದು ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ.ಯಶಸ್ವಿ ಜೈಸ್ವಾಲ್, ದೇವದತ್ ಪಡೀಕಲ್, ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್‍ನಲ್ಲಿ ರನ್ ಮಳೆ ಸುರಿಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ ಹೇಟ್ಮಯರ್ ತಂಡದ ಮೊತ್ತ ಹೆಚ್ಚಿಸುವ ತಾಕತ್ತು ಹೊಂದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ ಮಿಂಚಿದ್ದಾರೆ. ಸ್ಪಿನ್ನರ್ಸ್‍ಗಳಾದ ಆರ್.ಅಶ್ವಿನ್, ಯಜ್ವಿಂದರ್ ಚಾಹಲ್ ಪಂದ್ಯವನ್ನು ತಿರುಗಿಸುವ ತಾಕತ್ತು ಹೊಂದಿದ್ದಾರೆ. ಒಟ್ಟಿನಲ್ಲಿ ಆರ್‍ಸಿಬಿ ರಾಜಸ್ಥಾನ ರಾಯಲ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಗ್ಲೆನ್ ಮ್ಯಾಕ್ಸ್‍ವೆಲ್ ಆಡಲ್ಲ
ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಇಂದು ಗ್ಲೆನ್ ಮ್ಯಾಕ್ಸ್‍ವೆಲ್ ಕಣಕ್ಕಿಳಿಯಲ್ಲ. ಮ್ಯಾಕ್ಸ್‍ವೆಲ್ ಈಗಾಗಲೇ ಆರ್‍ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಆಡಲ್ಲ. ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಏ.6ರವರೆಗೆ ತನ್ನ ಆಟಗಾರರಿಗೆ ಆಡದಂತೆ ಷರತ್ತು ವಿಧಿಸಿದೆ.

- Advertisement -

Latest Posts

Don't Miss