ಮುಂಬೈ:ಐಪಿಎಲ್ನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಟೂರ್ನಿಯಿಂದಲ್ಲೇ ಹೊರ ಬೀಳುವ ಭೀತಿಯಲ್ಲಿರುವ ಆರ್ಸಿಬಿ ಇಂದಿನ ಡು ಆರ್ ಡೈ ಮ್ಯಾಚ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.
ಇಂದಿನ ವಾಂಖೆಡೆ ಮೈದಾನದಲ್ಲಿ ನಡೆಯುವ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ. 13 ಪಂದ್ಯಗಳನ್ನಾಡಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಇಂದಿನ ಪಂದ್ಯವನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಈ ಪಂದ್ಯವನ್ನು ಗೆದ್ದರೆ ಆರ್ಸಿಬಿಗೆ ಪ್ಲೇ ಆಫ್ ಬಾಗಿಲು ತೆರೆಯಲಿದೆ. ಆದರೆ ಅಷ್ಟು ಸುಲಭವಿಲ್ಲ. ಗುಜರಾತ್ ವಿರುದ್ಧ ಭಾರೀ ಅಂತರದಿಂದ ಗೆಲ್ಲಬೇಕು ಜೊತೆಗೆ ಉಳಿದ ತಂಡಗಳು ಸೋಲಬೇಕು.
ಈ ಹಿಂದಿನ ಸೀಸನ್ ಗಳಂತೆ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಲು ಪರದಾಡುತ್ತಿದೆ. ಬ್ಯಾಟಿಂಗ್ ಸಮಸ್ಯೆಯನ್ನು ಈ ಬಾರಿಯೂ ಎದುರಿಸುತ್ತಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ರಿಟೈನ್ ಆಗಿದ್ದ ಮೊಹ್ಮದ್ ಸಿರಾಜ್ ದುಬಾರಿ ಬೌಲರ್ ಆಗಿ ತಂಡಕ್ಕೆ ದೊಡ್ಡ ತಲೆ ನೋವಾಗಿದ್ದಾರೆ.
ಸಿರಾಜ್ ಬದಲು ಸಿದ್ದಾರ್ಥ್ ಕೌಲ್ ತಂಡಕ್ಕೆ ನೆರವಾಗಬಹುದು. ಹರ್ಷಲ್ ಪಟೇಲ್ ಹಾಗೂ ವನಿಂದು ಹಸರಂಗ ಮಿಂಚಿದರೆ ಆರ್ಸಿಬಿ ಗೆಲುವು ಖಚಿತವಾಗಲಿದೆ.