Thursday, December 12, 2024

Latest Posts

ಮುಂಬೈ ಎದುರು ರಾಜಸ್ಥಾನಕ್ಕೆ ರಾಯಲ್ ಗೆಲುವು

- Advertisement -

ಮುಂಬೈ: ಜೋಸ್ ಬಟ್ಲರ್ ಅವರ ಅತ್ಯದ್ಬುತ ಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ಬಲಿಷ್ಠ ಮುಂಬೈ ಎದುರು 23 ರನ್‍ಗಳ ಗೆಲುವು ದಾಖಲಿಸಿದೆ.ರಾಜಸ್ಥಾನ ಸತತ ಎರಡನೆ ಗೆಲುವು ದಾಖಲಿಸಿದೆ.


ಭಾನುವಾರ ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಫಿಲ್ಡಿಂಗ್ ಆಯ್ದುಕೊಂಡಿತು.ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ಕೊಡುವಲ್ಲಿ ಎಡವಿದರು.

ಜೈಸ್ವಾಲ್ 1 ರನ್‍ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ದೇವದತ್ ಪಡೀಕಲ್ 7, ಸಂಜು ಸ್ಯಾಮನ್ಸ್ 30, ಶಮ್ರಾನ್ ಹೇಟ್ಮಯರ್ 35, ರಿಯಾನ್ ಪರಾಗ್ 5 ರನ್‍ಗಳಿಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಜೋಸ್ ಬಟ್ಲರ್ ಆಕರ್ಷಕ್ 100 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು.

ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 193 ರನ್ ಕಲೆ ಹಾಕಿತು.
194 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ನಾಯಕ ರೋಹಿತ್ ಶರ್ಮಾ (10 ರನ್) ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಅನಮೋಲ್‍ಪ್ರೀತ್ ಸಿಂಗ್ 5 ರನ್, ಓಪನರ್ ಇಶನ್ ಕಿಶನ್ 41 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು.

ತಿಲಕ್ ವರ್ಮಾ 61, ಕಿರಾನ್ ಪೊಲಾರ್ಡ್ 22, ಟಿಮ್ ಡೇವಿಡ್ 1, ಡೇನಿಯಲ್ ಸ್ಯಾಮ್ಸ್ 0, ಮುರುಗನ್ ಅಶ್ವಿನ್ 6 ಅಂತಿಮವಾಗಿ ಮುಂಬೈ ತಂಡ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ ಕಲೆ ಹಾಕಿ ಸೋಲಿಗೆ ಶರಣಾಯಿತು. ಶತಕ ಸಿಡಿಸಿದ ಜೋಸ್ ಬಟ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

- Advertisement -

Latest Posts

Don't Miss