Wednesday, April 16, 2025

Latest Posts

ಇಂದು ಸನ್ ರೈಸರ್ಸ್ಗೆ ಕೋಲ್ಕತ್ತಾ ಸವಾಲು  

- Advertisement -

ಪುಣೆ:ಐಪಿಎಲ್ ನ 61ನೇ ಪಂದ್ಯದಲ್ಲಿ ಕೋಲ್ಕತ್ತಾ ತಂಡ ಸನ್ ರೈಸರ್ಸ್ ತಂಡವನ್ನು ಎದುರಿಸಲಿದೆ.

ಇಲ್ಲಿನ ಎಂಸಿಎ ಮೈದಾನದಲ್ಲಿ ನಡೆಯಲಿರುವ ಕದನ ಎರಡೂ ತಂಡಗಳಿಗೂ ಗೆಲುವು ಮುಖ್ಯವಾಗಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ಸನ್ ರೈಸರ್ಸ್ ತಂಡ ಈ ಬಾರಿ ಏರಿಳಿತ ಕಂಡಿದೆ.

ಸತತ 5 ಪಂದ್ಯಗಳ ಗೆಲುವಿನ ನಂತರ ಸನ್ ರೈಸರ್ಸ್ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ತಂಡದ ಪ್ರಮುಖ ಇಬ್ಬರು ಆಟಗಾರರಾದ ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದಾರೆ. ಇದರ ಪರಿಣಾಮ ಎದುರಾಳಿ ತಂಡಗಳು 190 ರನ್ ಹೊಡೆಯುತ್ತಿದೆ.

ಪ್ಲೇ ಆಫ್ ಗೆ ಹೋಗ ಬೇಕಿದ್ದಲ್ಲಿ  ಸನ್ ರೈಸರ್ಸ್ ಉಳಿದಿರುವಮುಂದಿನ ಮೂರು ಪಂದ್ಯಗಳನ್ನು ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಒಂದು ವೇಳೆ ಒಂದು ಪಂದ್ಯವನ್ನು ಸೋತರೆ ರಾಜಸ್ಥಾನ ರಾಯಲ್ಸ್ ಅಥವಾ ಆರ್ ಸಿಬಿ ತಂಡಗಳು ಒಂದು ಪಂದ್ಯವನ್ನು ಸೋಲಬೇಕು.

ನಟರಾಜನ್ ಹಾಗೂ ಸುಂದರ್ ಸ್ಥಾನದಲ್ಲಿ ಆಡುತ್ತಿರುವ ಫಾಜಲ್ ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ ಸುಚಿತ್ ಹಾಗೂ ಶ್ರೇಯಸ್ ಗೋಪಾಲ್ ಹಿಡಿತದಲ್ಲಿ ಆಡುತ್ತಿಲ್ಲ.

ಸಹಿ ಸುದ್ದಿ ಎಂದರೆ ಇಂದಿನ ಪಂದ್ಯದಲ್ಲಿ ಸುಂದರ್ ಹಾಗೂ ನಟರಾಜನ್ ಇಬ್ಬರು ಆಡುತ್ತಿದ್ದಾರೆ. ಪ್ಲೇ ಆಫ್ ಗಾಗಿ ಆಡಲಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ನಾಯಕ ಕೇನ್ ವಿಲಿಯಮ್ಸನ್ ಕಳಪೆಯಾಗಿ ಬ್ಯಾಟಿಂಗ್ ಮಾಡಿದ್ದಾರೆ. ವಿಲಿಯ್ಸಮನ್ ಅವರ ಪವರ್ ಪ್ಲೇ ಸ್ಟ್ರೈಕ್ ರೇಟ್ 79.52 ಹೊಂದಿದ್ದಾರೆ. ಮತ್ತೊರ್ವ ಓಪನರ್ ಅಭಿಷೇಕ್ ಶರ್ಮಾ ಅದ್ಬುತ ಆರಂಭ ನೀಡಿ ಇದೀಗ ಫಾರ್ಮ್ ಕಳೆದುಕೊಂಡಿದ್ದಾರೆ.

ಇನ್ನು ಕೋಲ್ಕತ್ತಾ ತಂಡ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಮಸ್ಯೆ ಎದುರಿಸುತ್ತಿದೆ. ವೆಂಕಟೇಶ್ ಅಯ್ಯರ್ ಫಾರ್ಮ್ಗೆ ಮರಳಿದ್ದಾರೆ. ಅಜಿಂಕ್ಯ ರಹಾನೆ ಮತ್ತೆ ಮರಳಿರುವುದು ತಂಡಕ್ಕೆ ಹೊಸ ಭರವಸೆ ಮೂಡಿಸಿದೆ.

ಮೊನ್ನೆ ಮುಂಬೈ ವಿರುದ್ದದ ಪಂದ್ಯದಲ್ಲಿ ಮೊದಲ ವಿಕೆಟ್ಗೆ 64 ರನ್ ಗಳಿಸಿತು. ಇದು ಅತಿ ಕೆಕೆಆರ್ ತಂಡದ ಪವರ್ ಪ್ಲೇಯಲ್ಲಿ ದೊಡ್ಡ ಮೊತ್ತವಾಗಿದೆ.ಗಾಯದ ಸಮಸ್ಯೆಯಿಂದಾಗಿ ಪ್ಯಾಟ್ ಕಮಿನ್ಸ್ ಮತ್ತೆ ತವರಿಗೆ ಮರಳಿದ್ದಾರೆ.

ವರುಣ್ ಚಕ್ರವರ್ತಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಏನೇ ಸಕಾರಾತ್ಮಕ ಅಂಶವಿದ್ದರೂ ಕೋಲ್ಕತ್ತಾ ತಂಡ ಪ್ಲೇ ಆಫ್ ಹೋಗೋದು ಅನುಮಾನದಿಂದ ಕೂಡಿದೆ.

- Advertisement -

Latest Posts

Don't Miss