Saturday, December 6, 2025

Latest Posts

ಕೇನ್ ವಿಲಿಯಮ್ಸನ್ ಅಬ್ಬರಕ್ಕೆ ಮುಳುಗಿದ ಟೈಟಾನ್ಸ್

- Advertisement -

ಮುಂಬೈ: ನಾಯಕ ಕೇನ್ ವಿಲಿಯಮ್ಸನ್ ಅವರ ಅಮೋಘ ಬ್ಯಾಟಿಂಗ್ ನೆರೆವಿನಿಂದ ಸನ್‍ರೈಸರ್ಸ್ ಹೈದ್ರಾಬಾದ್ ತಂಡ ಬಲಿಷ್ಠ ಗುಜರಾತ್ ಟೈಟಾನ್ಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.


ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್‍ರೈಸರ್ಸ್ ಫೀಲ್ಡಿಂಗ್ ಆಯ್ದುಕೊಂಡಿತು. ದೊಡ್ಡ ಮೊತ್ತ ಕಲೆ ಹಾಕಬೇಕೆಂದು ಕಣಕ್ಕಿಳಿದ ಗುಜರಾತ್ ಬ್ಯಾಟರ್‍ಗಳಿಗೆ ಸನ್‍ರೈಸರ್ಸ್ ವೇಗಿಗಳು ಶಾಕ್ ಮೇಲೆ ಶಾಕ್ ಕೊಟ್ಟರು.

ಮ್ಯಾಥ್ಯೂ ವೇಡ್ 19, ಶುಭಮನ್ ಗಿಲ್ 7, ಸಾಯಿ ಸುದರ್ಶನ್ 11 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಹಾರ್ದಿಕ್ ಪಾಂಡ್ಯ 50, ಡೇವಿಡ್ ಮಿಲ್ಲರ್ 12, ಅಭಿನವ್ ಮನೋಹರ್ 35, ರಾಹುಲ್ ತೆವಾಟಿಯಾ 6 ರನ್ ಗಳಿಸಿದರು. ಗುಜರಾತ್ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು.

163 ರನ್‍ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಸನ್‍ರೈಸರ್ಸ್ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಭರ್ಜರಿ ಆರಂಭ ನೀಡಿದರು. ಬೌಂಡರಿಗಳ ಸುರಿಮಳೆಗೈದ ಅಭಿಷೇಕ್ ಶರ್ಮಾ 42 ರನ್ ಗಳಿಸಿದರು.

ರಾಹುಲ್ ತ್ರಿಪಾಠಿ ಗಾಯಗೊಂಡ ಹಿನ್ನೆಲೆಯಲ್ಲಿ ರಿಟೈರ್ ಹರ್ಟ್ ಆದರು.ನಂತರ ಬಂದ ನಿಕೊಲೊಸ್ ಪೂರಾನ್ ಒಳ್ಳೆಯ ಸಾಥ್ ಕೊಟ್ಟರು. ನಾಯಕ ಕೇನ್ ವಿಲಿಯಮ್ಸನ್57 ರನ್ ಗಳಿಸಿ ಹಾರ್ದಿಕ್‍ಗೆ ಬಲಿಯಾದರು.

ನಿಕೊಲೊಸ್ ಪೂರನ್ ಅಜೇಯ 34, ಏಡಿನ್ ಮಾರ್ಕ್‍ರಾಮ್ ಅಜೇಯ 12 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಸನ್‍ರೈಸ್ರ್ಸ 19.1 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಅರ್ಧ ಶತಕ ಸಿಡಿಸಿದ ಕೇನ್ ವಿಲಿಯಮ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

- Advertisement -

Latest Posts

Don't Miss