ಕೋಲ್ಕತ್ತಾ: ಡೇವಿಡ್ ಮಿಲ್ಲರ್ ಅವರ ಸ್ಫೋಟಕ ಬ್ಯಾಟಿಂಗ್ ನೆರೆವಿನಿಂದ ಗುಜರಾತ್ ಟೈಟಾನ್ಸ್ ಎದುರಾಳಿ ರಾಜಸ್ಥಾನ ರಾಯಲ್ಸ್ ವಿರುದ್ಧ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ ಫೈನಲ್ ತಲುಪಿದೆ.ಚೊಚ್ಚಲ ಟೂರ್ನಿಯಲ್ಲೇ ಫೈನಲ್ ತಲುಪಿದ ಸಾಧನೆ ಮಾಡಿದೆ.
ಇಲ್ಲಿನ ಈಡನ್ ಮೈದಾನದಲ್ಲಿ ರಾಜಸ್ಥಾನ ವಿರುದ್ಧ ನಡೆದ ಕ್ವಾಲಿಫೈರ್ 1ರಲ್ಲಿ ಗುಜರಾತ್ ಟೈಟಾನ್ಸ್ ರೋಚಕವಾಗಿ ಗೆದ್ದು ಫೈನಲ್ ತಲುಪಿತು. ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 3, ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ 47, ದೇವದತ್ ಪಡಿಕಲ್ 28, ಶಿಮ್ರಾನ್ ಹೇಟ್ಮಯರ್ 4, ರಿಯಾನ್ ಪರಾಗ್ 4, ಆರ್. ಅಶ್ವಿನ್
2 ರನ್ ಗಳಿಸಿದರು. ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು.
189 ರನ್ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಓಪನರ್ ವೃದ್ದಿಮಾನ್ ಸಾಹಾ (0) ವಿಕೆಟ್ ಕಳೆದುಕೊಂಡಿತು.ಶುಭಮನ್ ಗಿಲ್ 35, ಮ್ಯಾಥೀವ್ ವೇಡ್ 35, ಹಾರ್ದಿಕ್ ಪಾಂಡ್ಯ ಅಜೇಯ 40, ಡೇವಿಡ್ ಮಿಲ್ಲರ್ ಅಜಯ 68 ರನ್ ಸಿಡಿಸಿದರು.
ಕೊನೆಯಲ್ಲಿ 6 ಎಸೆತದಲ್ಲಿ 16 ರನ್ ಬೇಕಿದ್ದಾಗ ಡೇವಿಡ್ ಮಿಲ್ಲರ್ ಪ್ರಸಿದ್ಧ ಕೃಷ್ಣ ಅವರ ಓವರ್ ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಟೈಟಾನ್ಸ್ 19.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಕಲೆ ಹಾಕಿತು. ಟ್ರೆಂಟ್ ಬೌಲ್ಟ್ ಹಾಗೂ ಮೆಕ್ ಕೊಯೆ ತಲಾ 1 ವಿಕೆಟ್ ಪಡೆದರು. ಡೇವಿಡ್ ಮಿಲ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
https://karnatakatv.net/wp-admin/post-new.php