ಮುಂಬೈ: ವೃದ್ದಿಮಾನ್ ಸಾಹಾ ಅವರ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಗುಜರಾತ್ ಟೈಟಾನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಮೊದಲ ಕ್ವಾಲಿಫೈಯರ್‍ನಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಆಡಲಿದೆ.
ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಬ್ಯಾಟರ್ ಡೇವೊನ್ ಕಾನ್ವೆ (5ರನ್) ವಿಕೆಟ್ ಕಳೆದುಕೊಂಡು ಚೆನ್ನೈ ಆಘಾತ ಅನುಭವಿಸಿತು.
ನಂತರ ಬಂದ ಮೊಯಿನ್ ಅಲಿ (21), ನಾರಾಯಣ ಜಗದೀಶನ್ ಅಜೇಯ 39, ಶಿವಂ ದುಬೆ 0, ಧೋನಿ7, ಮಿಚೆಲ್ ಸ್ಯಾಂಟ್ನರ್ ಅಜೇಯ 1 ರನ್ ಗಳಿಸಿದರು.
ಚೆನ್ನೈ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 133 ರನ ಕಲೆ ಹಾಕಿತು. ಟೈಟಾನ್ಸ್ ಪರ ಶಮಿ 2, ಯಶ್ ದಯಾಳ್, ರಶೀದ್ ಖಾನ್, ರವಿಶಂಕರ್ ಸಾಯಿ ಕಿಶೋರ್ ತಲಾ 1 ವಿಕೆಟ್ ಪಡೆದರು.
134 ರನ್ ಗಳ ಗುರಿ ಬೆನ್ನತ್ತಿದ ಟೈಟಾನ್ಸ್ ತಂಡಕ್ಕೆ ಆರಂಭಿಕರಾದ ವೃದ್ದಿಮಾನ್ ಸಾಹಾ (67)ಹಾಗೂ ಶುಭಮನ್ ಗಿಲ್ (18) ಉತ್ತಮ ಆರಂಭ ನೀಡಿದರು.
ಮ್ಯಾಥೀವ್ ವೇಡ್ 18, ಹಾರ್ದಿಕ್ ಪಾಂಡ್ಯ 7, ಡೇವಿಡ್ ಮಿಲ್ಲರ್ ಅಜೇಯ 15 ರನ್ ಗಳಿಸಿದರು. ಟೈಟಾನ್ಸ್ 19.1 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಪೇರಿಸಿತು.