Sunday, April 13, 2025

Latest Posts

ಪ್ಲೇ ಆಫ್ ಲೆಕ್ಕಾಚಾರ ಹೇಗೆ ? 4ನೇ ಸ್ಥಾನ ಡೆಲ್ಲಿಗೋ ಆರ್ಸಿಬಿಗೋ..?

- Advertisement -

ಮುಂಬೈ:15ನೇ ಆವೃತ್ತಿಯ ಐಪಿಎಲ್ ನಿರ್ಣಾಯಕ ಘಟ್ಟ ತಲುಪಿದೆ. ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ಪಂಜಾಬ್ ವಿರುದ್ಧ ಗೆದ್ದ ಪರಿಣಾಮ ಆರ್ಸಿಬಿ ಟಾಪ್ 4ರಿಂದ ಹೊರ ಬಿದ್ದಿದೆ.

ಗುಜರಾತ್ ಟೈಟಾನ್ಸ್ ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ. ಇನ್ನು ಲಕ್ನೊ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ತಂಡಗಳು ಪ್ಲೇ ಆಫ್ ಪ್ರವೇಶಿಸೋದು ಖಚಿತವಾಗಿದೆ. ಇನ್ನು ನಾಲ್ಕನೆ ಸ್ಥಾನಕ್ಕೆ ಯಾವ ತಂಡ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಪಂಜಾಬ್ ತಂಡ ಡೆಲ್ಲಿ ವಿರುದ್ಧ ಸೋತಿರುವುದರಿಂದ ಕೊನೆಯ ಪಂದ್ಯವನ್ನು ಗೆಲ್ಲುವ ಜೊತೆಗೆ ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ. ಡೆಲ್ಲಿ ಹಾಗೂ ಆರ್ಸಿಬಿ ನಡುವೆ ಯಾರಿಗೆ ಪ್ಲೇ ಆಫ್ ಟಿಕೆಟ್ ಅನ್ನೋದು ಕುತೂಹಲ ಮೂಡಿಸಿದೆ. ಎರಡೂ ತಂಡಗಳಿಗೂ ಇನ್ನು ತಲಾ ಒಂದು ಪಂದ್ಯಗಳು ಬಾಕಿ ಇದೆ. ಒಂದು ವೇಳೆ ಎರಡೂ ತಂಡಗಳು ಕೊನೆಯ ಪಂದ್ಯಗಳನ್ನು ಗೆದ್ದರೆ ಯಾರು ಪ್ಲೇ ಆಫ್ ಪ್ರವೇಶ ಪಡೆಯಲಿದ್ದಾರೆ ಅನ್ನೋದು ಪ್ರಶ್ನೆಯಾಗಿದೆ.

ಡೆಲ್ಲಿ ತಂಡ ಮುಂಬೈ ವಿರುದ್ಧ ಸೋತರೆ ಆರ್ಸಿಬಿ ಟೈಟಾನ್ಸ್ ವಿರುದ್ಧ ಗೆದ್ದರೆ ಆರ್ಸಿಬಿ ಪ್ಲೇ ಆಫ್ಗೆ ಹೋಗೋದು ಖಚಿತವಾಗಲಿದೆ.

ಹಾಗೆಯೆ ಡೆಲ್ಲಿ ಸೋತು ನಂತರ ಆರ್ಸಿಬಿ ಸೋತರೆ ಪ್ಲೇ ಆಫ್ ಲೆಕ್ಕಾಚಾರ ಕಠಿಣವಾಗಲಿದೆ. ಅಂಕಗಳು ಒಂದೇ ಇದ್ದರೂ ಉತ್ತಮ ನೆಟ್ ರನ್ ರೇಟ್ ಹೊಂದಿರುವ  ತಂಡ ಪ್ಲೇ ಆಫ್ ಪ್ರವೇಶಿಸಲಿದೆ.

ಇಲ್ಲಿ ಆರ್ಸಿಬಿ ನೆಟ್ ರೇಟ್ ಮೈನಸ್ ಇರುವುದರಿಂದ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ವಿರುದ್ಧ ಭಾರೀ ಅಂತದಿಂದ ಸೋಲ ಬೇಕಿದೆ.

ಆರ್ಸಿಬಿ ಹಾಗೂ ಡೆಲ್ಲಿ ಮುಂದಿನ ಪಂದ್ಯಗಳಲ್ಲಿ ಸೋತರೆ ಕೋಲ್ಕತ್ತಾ ಹಾಗೂ ಪಂಜಾಬ್ಗೆ ಪ್ಲೇ ಆಫ್ ಅವಕಾಶ ಹೋಗುವ ಸಾಧ್ಯತೆಯೂ ಇದೆ. ಪ್ಲೇ ಆಫ್ ಲೆಕ್ಕಾಚಾರ್ಕಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

- Advertisement -

Latest Posts

Don't Miss