Friday, November 22, 2024

Latest Posts

ಇರ್ಫಾನ್ ಪಠಾಣ್ ಮೇಕಪ್​ ಆರ್ಟಿಸ್ಟ್​ ಶ*ವವಾಗಿ ಪತ್ತೆ!

- Advertisement -

ಟೀಂ ಇಂಡಿಯಾ ಮಾಜಿ ಬೌಲರ್ ಇರ್ಫಾನ್ ಪಠಾಣ್ ಅವರ ಮೇಕಪ್​ ಆರ್ಟಿಸ್ಟ್​ ಫಯಾಜ್ ಅನ್ಸಾರಿ ವೆಸ್ಟ್ ಇಂಡೀಸ್​ನ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಟಿ20 ವಿಶ್ವಕಪ್ ನಡೆಯುತ್ತಿರುವ ಹಿನ್ನಲೆ ಇರ್ಫಾನ್ ಪಠಾಣ್ ಅವರು ವೀಕ್ಷಕ ವಿವರಣೆ ತಂಡದ ಭಾಗವಾಗಿ ವೆಸ್ಟ್ ಇಂಡೀಸ್​ಗೆ ತೆರಳಿದ್ದಾರೆ. ಹೀಗಾಗಿ, ಫಯಾಜ್ ಕೂಡ ಇರ್ಫಾನ್ ಜೊತೆ ಹೋಗಿದ್ರು. ಜೂ.21ರ ಶುಕ್ರವಾರ ಸಂಜೆ ಅನ್ಸಾರಿ ಹೋಟೆಲ್ ಈಜುಕೊಳದಲ್ಲಿ ಈಜುವಾಗ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಫಯಾಜ್ ಅನ್ಸಾರಿ ಉತ್ತರ ಪ್ರದೇಶದ ಬಿಜ್ನೋರ್​​ ನಾಗಿನಾ ಮೂಲದವರಾಗಿದ್ದು, 22 ವರ್ಷಗಳಿಂದ ಹಿಂದೆ ಮುಂಬೈನಲ್ಲಿ ತಮ್ಮದೇ ಆದ ಸಲೂನ್ ಪ್ರಾರಂಭಿಸಿದ್ದಾರೆ. ಪಠಾಣ್ ಮೇಕಪ್​ಗಾಗಿ ಅವರ ಸಲೂನ್​ಗೆ ಭೇಟಿ ನೀಡುತ್ತಿದ್ರು. ನಂತರ ಇರ್ಫಾನ್ ಅವರು ಅನ್ಸಾರಿಯನ್ನು ತಮ್ಮ ವೈಯಕ್ತಿಕ ಮೇಕಪ್ ಕಲಾವಿದನನ್ನಾಗಿ ಇಟ್ಟುಕೊಂಡಿದ್ದರು. ಅವರನ್ನು ವಿವಿಧ ದೇಶಗಳಿಗೂ ಕರೆದೊಯ್ಯುತ್ತಿದ್ದರು.

- Advertisement -

Latest Posts

Don't Miss